‘Yadbhavam Tadbhavati’, which won around 75 awards at international film festivals, released on YouTube on Vijayadashami – ವಿಭಿನ್ನ ಪ್ರಯೋಗದ ಮನೋವೈಜ್ಞಾನಿಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಮೂರು ಪಾತ್ರಗಳಲ್ಲೂ ಅಮಿತ್ ರಾವ್ ಅಭಿನಯ.
ಬ್ರಹ್ಮ ಸಿನೆಮಾಹಾಲಿಕ್ ಡಿಜಿಟಲ್ ಸ್ಟುಡಿಯೋಜ್ (BCD Studiouz) ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಯದ್ಭಾವಂ ತದ್ಭವತಿ’ ವಿಭಿನ್ನ ಕಥಾಹಂದರ ಮತ್ತು ಪ್ರಯೋಗಾತ್ಮಕ ನಿರೂಪಣೆಯ ಮೂಲಕ ಗಮನ ಸೆಳೆಯುತ್ತಿದೆ.
ಮನೋವೈಜ್ಞಾನಿಕ ಥ್ರಿಲ್ಲರ್ ಪ್ರಕಾರದ ಈ ಚಿತ್ರದಲ್ಲಿ ಕೇವಲ ಮೂರು ಪಾತ್ರಗಳಿದ್ದು, ಈ ಮೂರೂ ಪಾತ್ರಗಳಿಗೆ ಅಮಿತ್ ರಾವ್ ಅವರೇ ಜೀವ ತುಂಬಿದ್ದಾರೆ. ಒಂದೇ ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವುದು ಚಿತ್ರದ ವಿಶೇಷ ಆಕರ್ಷಣೆಯಾಗಿದೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಅಮಿತ್ ರಾವ್ ಅವರೇ ನಿರ್ವಹಿಸಿದ್ದಾರೆ.
ಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ವಿಶ್ವದ ವಿವಿಧ ದೇಶಗಳ ಚಿತ್ರಗಳೊಂದಿಗೆ ಸ್ಪರ್ಧಿಸಿ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಪರಿಕಲ್ಪನೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ ಸೇರಿದಂತೆ ಸುಮಾರು 75 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಹಿಂದಿನ ಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಕುತೂಹಲಕಾರಿ ರೀತಿಯಲ್ಲಿ ಬೆಸೆಯುವ ಸಂಕೀರ್ಣ ಚಿತ್ರಕಥೆ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಈ ಚಿತ್ರವನ್ನು BCD Studiouz ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಅಮಿತ್ ರಾವ್ ಜಿ ಅವರ ಅಭಿನಯ ಹಾಗೂ ಚಿತ್ರದ ವಿಭಿನ್ನ ಪರಿಕಲ್ಪನೆಗೆ ಮೆಚ್ಚುಗೆ ದೊರೆಯುತ್ತಿದೆ.
ರಶ್ಮಿ ಅನೂಪ್ ರಾವ್ ವಸ್ತ್ರ ವಿನ್ಯಾಸ, ಮಂಜುನಾಥ್ ದೈವಜ್ಞ ನಿರ್ಮಾಣ ಸಾರಥ್ಯ, ಸುದೀಪ್ ಫ್ರೆಡ್ರಿಕ್ ಛಾಯಾಗ್ರಹಣ , ಸುಪ್ರೀತ್ ಬಿ.ಕೆ ವಿಎಫ್ಎಕ್ಸ್ & ಡಿಐ ಹಾಗೂ ಶಿವರಾಜ್ ಮೇಹು ಅವರ ಸಂಕಲನವಿರುವ ಈ ಚಿತ್ರಕ್ಕೆ ರಾಕಿ ಸೋನು ಸಂಗೀತ ನೀಡಿದ್ದಾರೆ.
ವಿಭಿನ್ನ ಕಥನ ಶೈಲಿ, ಸವಾಲಿನ ಚಿತ್ರಕಥೆ ಮತ್ತು ಒಂದೇ ಕಲಾವಿದನ ಬಹುಪಾತ್ರಗಳ ಅಭಿನಯದ ಮೂಲಕ ‘ಯದ್ಭಾವಂ ತದ್ಭವತಿ’ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಪ್ರಯತ್ನವಾಗಿ ಗುರುತಿಸಿಕೊಂಡಿದೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಈಗ ಕನ್ನಡದಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ನನಗೆ ತಿಳಿದಿರುವ ಹಾಗೆ ಭಾರತದಲ್ಲೇ ಇದೊಂದ ವಿಭಿನ್ನ ಪ್ರಯತ್ನ ಎನ್ನುತ್ತಾರೆ ನಿರ್ದೇಶಕ ಹಾಗೂ ನಟ ಅಮಿತ್ ರಾವ್.

