Attempt to sell ration rice to black marketeers in Hassan: Officials raid, 19 quintals of rice and millet seized – ಕಾಳಸಂತೆಗೆ ಪಡಿತರ ಅಕ್ಕಿ ಮಾರಲು ಯತ್ನಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ 19 ಕ್ವಿಂಟಾಲ್ ಅಕ್ಕಿ ಮತ್ತು ರಾಗಿಯನ್ನು ವಶಪಡಿಸಿಕೊಂಡಿದ್ದಾರೆ.
![]()
ಹಾಸನ: ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಲ್ಲದೆ, ಆಟೋದಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಇದೇ ವೇಳೆ, ಆಪೆ ಆಟೋದಲ್ಲಿ ಸಾಗಿಸುತ್ತಿದ್ದ 5 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 50 ಕೆಜಿ ರಾಗಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಅಕ್ರಮ ದಾಸ್ತಾನು ಮತ್ತು ಸಾಗಣೆ ಪ್ರಕರಣದಲ್ಲಿ 19 ಕ್ವಿಂಟಾಲ್ ಅಕ್ಕಿ ಹಾಗೂ 2.50 ಕ್ವಿಂಟಾಲ್ ರಾಗಿ ಪತ್ತೆಯಾಗಿದೆ.
ಆಹಾರ ಇಲಾಖೆಯ ಉಪ ನಿರ್ದೇಶಕಿ ವಸಂತಕುಮಾರಿ ಅವರ ನೇತೃತ್ವದಲ್ಲಿ ಆಹಾರ ನಿರೀಕ್ಷಕರಾದ ಜಗನ್ನಾಥ್, ಯತೀಶ್, ಪ್ರಭು ಶಂಕರ್ ಹಾಗೂ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
“ನಮ್ಮ ಇಲಾಖೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ನಾವು ಇಂದು ಹಾಸನದ 80 ಅಡಿ ರಸ್ತೆಯ ಆಟೋ ಒಂದರಲ್ಲಿ ಸಾಗಿಸುತ್ತಿದ್ದ 2.5 ಕ್ವಿಂಟಾಲ್ ಅಕ್ಕಿ ಹಾಗೂ 50ಕೆಜಿ ರಾಗಿ ಪತ್ತೆಯಾಗಿದ್ದು, ಮನೆಯ ದಾಸ್ತಾನು ಸೇರಿ ಒಟ್ಟು 19 ಕ್ವಿಂಟಾಲ ಅಕ್ಕಿ ಹಾಗೂ 2.5 ಕ್ವಿಂಟಲ್ ರಾಗಿಯನ್ನು ವಶಪಡಿಸಿಕೊಂಡು ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ”. ಇನ್ನು ಇದರ ಬಗ್ಗೆ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಒಂದು ಕ್ರಮ ವಹಿಸಲಾಗುತ್ತದೆ ಎಂದು ಭಾರತಕ್ಕೆ ಆಹಾರ ಇಲಾಖೆಯ ಉಪನಿರ್ದೇಶಕಿ ವಸಂತ ಕುಮಾರಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಹಾಸನದ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡಿತರ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಕುರಿತು ಮುಂದಿನ ತನಿಖೆ ನಡೆಯಲಿದೆ.
