Haveri: Fake voting case in the presence of ministers, beheading of government teacher, FIR against Congress worker – ಹಾವೇರಿಯಲ್ಲಿ ನಕಲಿ ಮತದಾನಕ್ಕೆ ಅವಕಾಶ ನೀಡಿದ ಸರ್ಕಾರಿ ಶಿಕ್ಷಕ ಅಮಾನತು ಮಾಡಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿತನ ತೋರಿದ ಆರೋಪದ ಹಿನ್ನೆಲೆ ಮತಗಟ್ಟೆ ಸಂಖ್ಯೆ 85ರ ಎಪಿಆರ್ಒ. ವಿ.ಜಿ. ಮಲ್ಲೂರು ಅವರನ್ನ ಸಸ್ಪೆಂಡ್ ಮಾಡಲಾಗಿದೆ.
ಹಾವೇರಿ (ಅ.26): ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ವೇಳೆ ಹಾವೇರಿ ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಶನಿವಾರ ನಕಲಿ ಮತದಾನ ನಡೆದಿರುವ ಆರೋಪ ಕೇಳಿಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರೊಂದಿಗೆ ಮತಗಟ್ಟೆಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಮತ್ತೊಬ್ಬರ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಬಿಜೆಪಿ ಬಿಗಿಪಟ್ಟು ಹಿಡಿದಿದ್ದು, ಈ ಸಂಬಂಧ ಶಿಕ್ಷಕರ ಅಮಾನತು ಮಾಡಲಾಗಿದೆ. ಇತ್ತ ನಕಲಿ ಮತ ಚಲಾಯಿಸಿದ ಶಿಲ್ಪಾ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಸರ್ಕಾರಿ ಶಿಕ್ಷಕ ಅಮಾನತು : ಹಾವೇರಿಯಲ್ಲಿ ನಕಲಿ ಮತದಾನಕ್ಕೆ ಅವಕಾಶ ನೀಡಿದ ಸರ್ಕಾರಿ ಶಿಕ್ಷಕ ಅಮಾನತು ಮಾಡಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿತನ ತೋರಿದ ಆರೋಪದ ಹಿನ್ನೆಲೆ ಮತಗಟ್ಟೆ ಸಂಖ್ಯೆ 85ರ ಎಪಿಆರ್ಒ. ವಿ.ಜಿ. ಮಲ್ಲೂರು ಅವರನ್ನ ಸಸ್ಪೆಂಡ್ ಮಾಡಲಾಗಿದೆ. ಆಶಾ ಪಾಟೀಲ್ ಬದಲಿಗೆ ಶಿಲ್ಪಾ ಬಡಮ್ಮನವರಿಗೆ ಮತದಾನ ನೀಡಲು ಅವಕಾಶ ಮಾಡಿಕೊಟ್ಟ ಆರೋಪ ಕೇಳಿ ಬಂದಿದೆ.
ಕರ್ತವ್ಯ ಲೋಪ ಹಿನ್ನೆಲೆ ಅಮಾನತು : ಅಕ್ಟೋಬರ್ 23ರಂದು ನಡೆದ ಮತದಾನದ ವೇಳೆ ಕರ್ತವ್ಯ ಲೋಪವಾಗಿದ್ದು, ಸೇವಾ ನಿಯಮಗಳ ಅಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಶಿಕ್ಷಕನನ್ನ ಅಮಾನತು ಮಾಡಲಾಗಿದೆ.ಹಾವೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.
ಶಿಲ್ಪಾ ಬಡಮ್ಮನವರ್ ವಿರುದ್ಧ FIR : ನಕಲಿ ಮತದಾನ ಆರೋಪದಡಿ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬಡಮ್ಮನವರ್ ವಿರುದ್ಧ FIR ದಾಖಲಾಗಿದ್ದು, ಬೇರೊಬ್ಬರ ಹೆಸರಿನಲ್ಲಿ ಮತದಾನ ಮಾಡಿರೋ ಬಗ್ಗೆ ಆರೋಪ ಇದೆ. ಕ್ರಮ ಸಂಖ್ಯೆ 50ರ ಆಶಾ ಪಾಟೀಲ್ ಹೆಸರಿನಲ್ಲಿ ಶಿಲ್ಪಾಳಿಂದ ಮತದಾನ ನಡೆದಿದೆ. ಬೇರೊಬ್ಬರಂತೆ ನಟಿಸಿ ಮತದಾನ ಮಾಡಿ ಅಕ್ರಮ ಎಸಗಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಾವೇರಿಯ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚುನಾವಣಾ ಅಕ್ರಮ ಆರೋಪದಡಿ ಶಿಲ್ಪಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗ್ತಿದೆ.
ಕಾಂಗ್ರೆಸ್ ಕಾರ್ಯಕರ್ತೆಯಿಂದ ನಕಲಿ ಮತದಾನ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ್ ಕುಮಾರ್ ನಿರ್ಲಗಿ ಪತ್ನಿ ಆಶಾ ಪಾಟೀಲ್ ಹೆಸರಿನಲ್ಲಿ ಶಿಲ್ಪಾ ಬಡಮ್ಮನವರ್ ಅವರು ಮತದಾನ ಮಾಡಿದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪದವೀಧರ ಮತದಾನದ ಹಕ್ಕೇ ಇಲ್ಲದಿದ್ದರೂ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾಳಿಂದ ಮತದಾನ ನಡೆದಿದೆ. ಮತಗಟ್ಟೆ ಸಿಬ್ಬಂದಿ ಆಶಾ ಪಾಟೀಲ್ ಹೆಸರು ಕೂಗುತ್ತಿದ್ದಂತೆ ಶಿಲ್ಪಾ ಅವರು ಬಂದು ಮತ ಚಲಾಯಿಸಿದ್ದಾರೆ ಎನ್ನುವ ಆರೋಪವಿದೆ.
ಸಚಿವರ ಎದುರೇ ನಕಲಿ ಮತದಾನ : ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ್ ನೀರ್ಲಗಿ ಪತ್ನಿ ಹೆಸರಲ್ಲಿ ನಕಲಿ ಮತದಾನ ನಡೆದಿದ್ದು, ಸಚಿವ ರುದ್ರಪ್ಪ ಲಮಾಣಿ ಜೊತೆಯಲ್ಲೇ ಸರತಿ ಸಾಲಿನಲ್ಲಿ ತೆರಳಿ ಶಿಲ್ಪಾ ಎಂಬಾಕೆ ನಕಲಿ ಮತದಾನ ಮಾಡಿದ್ದಾರೆ. ಮತಗಟ್ಟೆ ಸಿಬ್ಬಂದಿಗಳಿಗೆ ದಾಖಲಾತಿ ತೋರಿಸದೆ ನೇರವಾಗಿ ಎಂಟ್ರಿ ಕೊಟ್ಟ ಮಹಿಳೆ ಶಿಲ್ಪಾ, ಸಚಿವರ ಮುಂದೆಯೇ ನಕಲಿ ಮತದಾನ ಮಾಡಿದ್ದು, ಸಂಚಲನ ಸೃಷ್ಟಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಳಿದ್ದೇನು? : ಈ ಬಗ್ಗೆ ಮಾತಾಡಿದ ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ ನೀರ್ಲಗಿ ಅವರು, ನನ್ನ ಪತ್ನಿ ಹೆಸರಲ್ಲಿ ಮತದಾನ ದುರುಪಯೋಗ ಆಗಿದ್ದರೆ ತನಿಖೆಯಾಗಲಿ, ಪತ್ನಿ ಆಶಾ ಪಾಟೀಲ ಹೆಸರಲ್ಲಿ ಮತದಾನ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಶಿಲ್ಪಾ ಬಡಮ್ಮನವರ್ ಸಹ ಮತದಾನ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಮತದಾನ ಮಾಡಿದ ಬಳಿಕ ಉಳಿದ ಕ್ಷೇತ್ರದಲ್ಲಿ ಓಡಾಡುತ್ತಿದ್ದೆ. ನನ್ನ ಪತ್ನಿ ಆರೋಗ್ಯ ಸರಿಯಿರಲಿಲ್ಲ ಹೀಗಾಗಿ ಮನೆಯಲ್ಲಿ ಇರಲಿಲ್ಲ. ವಕೀಲರ ಜೊತೆ ಚರ್ಚಿಸಿ ನಾವು ಸಹ ಈ ಬಗ್ಗೆ ದೂರು ಸಲ್ಲಿಸುತ್ತೇವೆ ಎಂದಿದ್ದಾರೆ.
