Justice is being achieved for the struggle of sugarcane growers: DKSH holds an important meeting in Belgaum, what was the decision? – ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರ ಹೋರಾಟ ನಡೆಯುತ್ತಿದೆ. ಈ ನಡುವೆ ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಸೋಮವಾರ ಮಹತ್ವದ ಸಭೆ ಹಮ್ಮಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಜೊತೆಗೆ ಅವರು ಸಭೆ ನಡೆಸಲಿದ್ದಾರೆ. ಈ ಬಳಿಕ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗುತ್ತಾ? ಎಂಬ ಕುತೂಹಲವೂ ಕೆರಳಿಸಿದೆ. ಮತ್ತಷ್ಟು ವಿವರ ಇಲ್ಲಿದೆ.
- ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರ ಹೋರಾಟ.
- ಹೋರಾಟದ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಮಹತ್ವದ ಸಭೆ.
- ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಜೊತೆಗೆ ಅವರು ಸಭೆ ನಡೆಸಲಿದ್ದಾರೆ ಡಿಕೆಶಿ.

ಏನಂದ್ರು ಡಿಕೆಶಿ? : “ಬೇರೆ ರಾಜ್ಯಗಳಲ್ಲಿ ಸರ್ಕಾರವು ತನ್ನ ಕಬ್ಬು ಬೆಳೆಗಾರರಿಗೆ ಏನು ಕೊಡುತ್ತಿದೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಮೊದಲು ನಮ್ಮ ರಾಜ್ಯದ ರೈತರು ಬದುಕಬೇಕು. ಈ ಬಗ್ಗೆ ಚರ್ಚೆ ಮಾಡುತ್ತೇನೆ. ಅದಕ್ಕಾಗಿ ಬೆಂಗಳೂರಲ್ಲಿ ಸಭೆ ಬೇಡ ಅಂತಲೇ ಇಲ್ಲಿಗೆ ಬಂದಿದ್ದೇನೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
“ಕಬ್ಬು ಅರೆಯುವ ಕಾರ್ಖಾನೆಯವರೊಂದಿಗೆ ಹಾಗೂ ರೈತರೊಂದಿಗೆ ಮಾತನಾಡುತ್ತೇನೆ. ಅವರ ಮಾತನ್ನೂ ನಾನು ಕೇಳಬೇಕು. ಈ ಮೊದಲು ಕಾರ್ಖಾನೆಗಳಿಗೆ 300 ರೂಪಾಯಿ ಕೊಟ್ಟಿದೆ. ಸರ್ಕಾರವೂ 50 ರೂ. ನೀಡಿದೆ. ಹಾಗೇ ಅವರಿಂದಲೂ ಸ್ವಲ್ಪ ಹಣ ಕೊಡಿಸಿದ್ದೇವೆ. ಇಲ್ಲಿ ಸಮಸ್ಯೆ ಇದೆ. ಇದೇ ರೀತಿ ಬೇರೆ ರಾಜ್ಯಗಳೊಂದಿಗೂ ನಾನು ಚರ್ಚೆ ಮಾಡಿದ್ದೇನೆ. ಎಲ್ಲರೊಂದಿಗೆ ಚರ್ಚಿಸಿ ಮುಂದೆ ಹಾದಿಯನ್ನು ತೀರ್ಮಾನಿಸುತ್ತೇನೆ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಂದ್ ಎಚ್ಚರಿಕೆ : ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದಾರೆ. ದರ ನಿಗದಿಗಾಗಿ ರೈತರು ಪಟ್ಟು ಹಿಡಿದಿದ್ದು, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೆ ಇದ್ದರೆ ರಾಜ್ಯ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
