Diabetes: Is guava a panacea for diabetes? Don’t make these 2 mistakes while eating it – ಸೀಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಧುಮೇಹ ಇರುವವರು ಇದನ್ನು ತಿನ್ನುವಾಗ ಕೆಲವು ವಿಷಯಗಳನ್ನು ನೆನಪಿಡಬೇಕು. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
1/8

ಸೀಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ನಾರಿನಾಂಶ ಸೇರಿದಂತೆ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳಿವೆ. ಜೀರ್ಣಕ್ರಿಯೆಯಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆದರೆ ಮಧುಮೇಹ ಇರುವವರು ಈ ಹಣ್ಣನ್ನು ತಿನ್ನುವಾಗ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು.
2/8

ಮಧುಮೇಹ ಇರುವವರು ಸೀಬೆ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು. ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಆಹಾರದಲ್ಲಿರುವ ಸಕ್ಕರೆ ದೇಹದಲ್ಲಿ ನಿಧಾನವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ. ಅಲ್ಲದೆ, ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ. ಆದರೆ ಸೀಬೆ ಹಣ್ಣು ತಿನ್ನುವ ಪ್ರಮಾಣ ಮತ್ತು ಸೇವಿಸುವ ವಿಧಾನವೂ ಮುಖ್ಯವಾಗಿದೆ. ಈ ಬಗ್ಗೆ ಪೌಷ್ಟಿಕ ತಜ್ಞರಾದ ಲಿಮಾ ಮಹಾಜನ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
3/8

ಸಿಪ್ಪೆ ತೆಗೆಯದೆ ಹಣ್ಣನ್ನು ತಿನ್ನುವುದು: ಸಾಮಾನ್ಯವಾಗಿ ಹೆಚ್ಚಿನವರು ಸೀಬೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನುತ್ತಾರೆ. ಆದರೆ ಪೌಷ್ಟಿಕ ತಜ್ಞೆ ಲೀಮಾ ಮಹಾಜನ್ ಅವರ ಸಲಹೆಯ ಪ್ರಕಾರ, ಚೆನ್ನಾಗಿ ಹಣ್ಣಾದ ಸೀಬೆಯನ್ನು ಮಧುಮೇಹ ಇರುವವರು ಸಿಪ್ಪೆ ತೆಗೆದು ಸೇವಿಸುವುದು ಉತ್ತಮ. ಹಣ್ಣಿನ ಸಿಪ್ಪೆಯಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರಬಹುದು ಎಂಬುದು ಅವರ ಅಭಿಪ್ರಾಯ.
4/8

ಆದರೆ ಸಿಪ್ಪೆ ತೆಗೆದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣವಾಗುತ್ತದೆ ಎಂಬುದಕ್ಕೆ ಎಲ್ಲರಿಗೂ ಅನ್ವಯಿಸುವಷ್ಟು ಬಲವಾದ ವೈದ್ಯಕೀಯ ಸಾಕ್ಷ್ಯವಿಲ್ಲ. ಆದ್ದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ವೈದ್ಯರ ಸಲಹೆಗೆ ಅನುಗುಣವಾಗಿ ಆಹಾರ ಆಯ್ಕೆ ಮಾಡಿಕೊಳ್ಳಿ.
5/8

ಸೀಬೆ ಎಲೆಗಳನ್ನು ನಿರ್ಲಕ್ಷಿಸುವುದು: ಸೀಬೆ ಹಣ್ಣಿನ ಜೊತೆಗೆ ಅದರ ಎಲೆಗಳಿಗೂ ಕೆಲವು ಆರೋಗ್ಯಕರ ಗುಣಗಳಿವೆ. ತಜ್ಞರ ಪ್ರಕಾರ, ಸೀಬೆ ಎಲೆಗಳಲ್ಲಿ ಇರುವ ಕೆಲವು ಸಸ್ಯ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಸೀಬೆ ಎಲೆಗಳನ್ನು ಬಳಸಿ ತಯಾರಿಸುವ ಕಷಾಯ ಅಥವಾ ಟೀ ಬಗ್ಗೆ ಕೆಲವು ಅಧ್ಯಯನಗಳು ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿವೆ. ಆದರೆ ಇದನ್ನು ಕುಡಿಯುವುದರಿಂದ ಮಧುಮೇಹ ಸಂಪೂರ್ಣ ನಿಯಂತ್ರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯರ ಸಲಹೆ ಇಲ್ಲದೆ ಇದನ್ನು ಔಷಧಿಗೆ ಪರ್ಯಾಯವಾಗಿ ಬಳಸಬಾರದು.
6/8

ಸೀಬೆ ಎಲೆಗಳನ್ನು ನಿರ್ಲಕ್ಷಿಸುವುದು: ಸೀಬೆ ಹಣ್ಣಿನ ಜೊತೆಗೆ ಅದರ ಎಲೆಗಳಿಗೂ ಕೆಲವು ಆರೋಗ್ಯಕರ ಗುಣಗಳಿವೆ. ತಜ್ಞರ ಪ್ರಕಾರ, ಸೀಬೆ ಎಲೆಗಳಲ್ಲಿ ಇರುವ ಕೆಲವು ಸಸ್ಯ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಸೀಬೆ ಎಲೆಗಳನ್ನು ಬಳಸಿ ತಯಾರಿಸುವ ಕಷಾಯ ಅಥವಾ ಟೀ ಬಗ್ಗೆ ಕೆಲವು ಅಧ್ಯಯನಗಳು ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿವೆ. ಆದರೆ ಇದನ್ನು ಕುಡಿಯುವುದರಿಂದ ಮಧುಮೇಹ ಸಂಪೂರ್ಣ ನಿಯಂತ್ರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯರ ಸಲಹೆ ಇಲ್ಲದೆ ಇದನ್ನು ಔಷಧಿಗೆ ಪರ್ಯಾಯವಾಗಿ ಬಳಸಬಾರದು.
7/8

ಆರೋಗ್ಯ ಪ್ರಯೋಜನಗಳೇನು: ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹದ ರೋಗನಿರೋಧಕ ವ್ಯವಸ್ಥೆಗೆ ಬೆಂಬಲ ನೀಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಂ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತವೆ. ನಾರಿನಾಂಶ ಮಲಬದ್ಧತೆ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ.
8/8

ಸೀಬೆ ಹಣ್ಣು ಮಧುಮೇಹ ಇರುವವರು ಸಂಪೂರ್ಣವಾಗಿ ದೂರವಿರಬೇಕಾದ ಆಹಾರವಲ್ಲ. ಆದರೆ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ ಮತ್ತು ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.
