ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರು ಇಂದು ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ಆಟಗಾರನಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಅಲ್ಲದೆ ಮಾಜಿ ಆಟಗಾರರು ಸಹ ವಿಷ್ ಮಾಡಿದ್ದಾರೆ. ಈಗಾಗಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈಗ ಅವರು ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೀಮ್ ಇಂಡಿಯಾಕ್ಕೆ ಹಲವು ಪ್ರತಿಷ್ಠಿತ ಟ್ರೋಫಿ ತೊಡಿಸುವಲ್ಲಿ ಇವರ ಪಾತ್ರ ದೊಡ್ಡದು. ಮಾಹಿ ಸಂಕಷ್ಟದಲ್ಲಿದ್ದಾಗ ತಂಡಕ್ಕೆ ತಮ್ಮ ಬ್ಯಾಟಿಂಗ್ ಮೂಲಕ ನೆರವಾಗಿದ್ದ ಪ್ಲೇಯರ್. ಧೋನಿ ಹ್ಯಾಲಿಕ್ಯಾಪ್ಟರ್ ಶಾಟ್ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಮಹೇಂದ್ರ ಸಿಂಗ್ ಬರ್ತಡೆ ವೇಳೆ ಅವರು ನಿರ್ಮಿಸಿದ ಐದು ವಿಶೇಷ ದಾಖಲೆಗಳ ಪಟ್ಟಿ ಇಲ್ಲಿದೆ. ಈ ದಾಖಲೆಯನ್ನು ಬೇರೆ ಆಟಗಾರರು ಮುರಿಯುವುದು ಕೊಂಚ ಕಷ್ಟ.
