ಮಳೆಗಾಲ ಬಂತೆಂದ್ರೆ ಸಾಕು ಕೊಡಗಿನಲ್ಲಿ ಕೆಸರಿನಾಟಕ್ಕೇನು ಕಮ್ಮಿ ಇಲ್ಲ. ಧೋ…. ಎಂದು ಸುರಿಯುವ ಮಳೆಯ ನಡುವೆ ಕೆಸರಿ ಓಕುಳಿಯಲ್ಲಿ ಜನ ಮಿಂದೇಳ್ತಾರೆ. ನೀವು ಇಮ್ಯಾಜಿನ್ ಮಾಡದಿರೋ ಕ್ರೀಡೆಗಳೆಲ್ಲಾ ಆ ಕೆಸರಿನಲ್ಲಿ ಅನಾವರಣಗೊಳ್ಳುತ್ತೆ .. ಹಾಗಾದ್ರೆ ಹೇಗಿತ್ತು ಫಾರ್ಮಸ್ ಕ್ಲಬ್ ವತಿಯಿಂದ ನಡೆದ ಕೇಸರಿನೋಕುಳಿಯ ಆಟ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ.. ಮಳೆಯ ನಡುವೆ ಮಂಜಿನ ಆಟ, ಚಳಿಯ ಕಾಟ.. ಇದ್ತಾವುದೂ ಲೆಕ್ಕಕ್ಕಿಲ್ಲ ಎಂಬಂತೆ ಕೆಸರಿನ ಗದ್ದೆಯಲ್ಲಿ ಕೆಸರ ಓಕುಳಿ ಆಡ್ತಿರುವ ಮಕ್ಕಳು ಮಹಿಳೆಯರು… ಹಗ್ಗ ಜಗ್ಗಾಟ.. ಭರ್ಜರಿ ಓಟ.. ಕೆಸರಲ್ಲಿ ಕ್ರಿಕೆಟ್ ಆಟ.. ಇಂತಹ ದೃಷ್ಯಕಂಡು ಬಂದಿದ್ದು ಕೊಡಗು ಜಿಲ್ಲೆ ಮಡಿಕೇರಿಯ ತಾಳತ್ತಮನೆಯಲ್ಲಿ. ಫಾರ್ಮಸ್ ಕ್ಲಬ್ ತಾಳತ್ತಮನೆ ಇವರ ಸಹಯೋಗದಲ್ಲಿ ಮೊದಲ ವರ್ಷದ ಕೆಸರು ಗದ್ದೆ ಕ್ರೀಡಾಕೂಟವನ್ನ ಆಯೋಜಿಸಿದ್ದು ಮಲ್ಲನ ಬೆಳ್ಯಪ್ಪ ನವರ ಗದ್ದೆಯಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಕ್ರಿಕೇಟ್, ಓಟದ ಸ್ಪರ್ಧೆ ಆಯೋಜಿಸಿದ್ದು ಮಡಿಕೇರಿ ಸುತ್ತಮುತ್ತಲಿನ ಕ್ರೀಡಾಸಕ್ತರು ಭಾಗವಹಿಸಿದ್ರು. ಮೊದಲ ವರ್ಷದ ಕ್ರೀಡಾ ಕೂಟಕ್ಕೆ ಸಾರ್ವಜನಿಕರಿಂದ ಉತ್ತಮ ರೀತಿಯ ರೆಸ್ಪಾನ್ ಬಂದಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕ್ರೀಡಾ ಕೂಟ ಆಯೋಜಿಸುವ ಗುರಿ ಹೊಂದಿದೆ ಈ ಫಾರ್ಮರ್ಸ್ ಕ್ಲಬ್ ತಾಳತ್ತಮನೆ.
ಮಳೆಗಾಲ ಬಂತೆಂದ್ರೆ ಸಾಕು ಕೊಡಗಿನಲ್ಲಿ ಇಂತಹ ಕೆಸರು ಗದ್ದೆ ಕ್ರೀಡಾಕೂಟಗಳು ಆರಂಭವಾಗುತ್ತವೆ. ರೈತಾಪಿ ವರ್ಗಕ್ಕೆ ಗದ್ದೆ ಕೆಲಸದ ನಡುವಿನಲ್ಲಿ ಒಂದು ಬ್ರೇಕ್ ಅಂದ್ರೆ ಇದೇ ಕೆಸರು ಗದ್ದೆ ಕ್ರೀಡಾಕೂಟಗಳು. ಅಂತಹುದೇ ಕ್ರೀಡಾಕೂಟ ನಡೆದಿದ್ದು ಸ್ಥಳೀಯ ಮಟ್ಟದ ಕ್ರೀಡಾ ಪಟ್ಟುಗಳು ಬಹಳ ಉತ್ಸಾಹದಿಂದ ಕೇಸರಿನ ಆಟದಲ್ಲಿ ಭಾಗವಿಸಿದ್ರು. ಪ್ರಕೃತಿ ಸೌಂದರ್ಯದ ಶ್ರೀಮಂತ ಜಿಲ್ಲೆ ರಾಜ್ಯದ ಪುಟ್ಟಜಿಲ್ಲೆ ವಿಶೀಷ್ಟ ಸಂಸ್ಕೃತಿ ಆಚಾರ ವಿಚಾರಗಳಿಂದ ಗಮನಸೆಳೆಯುತ್ತಿರುವ ಕೊಡಗಿನಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸವ ಉದ್ದೆಶದಿಂದ ಮತ್ತು ಕ್ರೀಡೆಗಳನ್ನು ಉಳಿಸುವ ದೃಷ್ಠಿಯಿಂದ ಜೊತಗೆ ಮರೆಯಾಗುತ್ತಿರುವ ಗ್ರಾಮಿಣ ಸೊಗಡಿನ ಆಟೋಟಗಳನ್ನ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನ ಆಯೋಜನೆ ಮಾಡಲಾಗಿದ್ದು. ಈ ಒಂದು ಕೇಸರಿನೋಕುಳಿಯ ಆಟದಲ್ಲಿ ಓಡುತ್ತಾ, ಬಾಲ್ ಹಿಡಿಯುತ್ತಾ ಕೇಸರಿನಲ್ಲಿ ಆಡುತ್ತಾ ಸಖತ್ ಎಂಜಾಯ್ ಮಾಡಿದ್ರು.

ಒಟ್ಟಿನಲ್ಲಿ ಮಳೆಗಾಲದ ಕೆಸರಿನ ಆಟದ ಮಜವೇ ಬೇರೆ. ಊರವರೆಲ್ಲಾ ಸೇರಿ, ನೆರೆ ಊರವರನ್ನ ಸೇರಿಸಿಕೊಂಡು ಮಕ್ಕಳು, ಮಹಿಳೆಯರು, ಪುರುಷೆರು, ವೃದ್ದರು ಎನ್ನದೇ ಎಲ್ಲರೂ ಒಂಡೆದೆ ಸೇರಿ ಹೀಗೆ ಕೆಸರಿನಲ್ಲಿ ಎದ್ದು ಬಿದ್ದು ಆಟ ಆಡ್ತಿದ್ರೆ ನೋಡೋಕೆ ಎರಡು ಕಣ್ಣು ಸಾಲದು
