ರಾಯಚೂರು ಜಿಲ್ಲೆಯ ದೇವದುರ್ಗಾ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮಹಾದೇವಮ್ಮ(58) ಅಂಗನವಾಡಿ ಕಾರ್ಯಕರ್ತೆಯ ತಲೆ ಮತ್ತು ಕೈ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಕಟ್ಟ್ಡದ ಸೀಲಿಂಗ್ ಕುಸಿತದ ರಭಸಕ್ಕೆ ಅಂಗನವಾಡಿಯ ಪ್ಲಾಸ್ಟಿಕ್ ಚೇರ್ ಪುಡಿ ಪುಡಿಯಾಗಿದೆ.

2014-2015 ನೆ ಸಾಲಿನಲ್ಲಿಐಆರ್ಡಿಎಫ್ ವತಿಯಿಂದ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕೇವಲ ಹತ್ತು ವರ್ಷಗಳ ಅಂತರದಲ್ಲೇ ನೆಲ ಕಚ್ಚಿದ ಅಂಗನವಾಡಿ ಕಟ್ಟಡದ ಸೀಲಿಂಗ್.ಮಾಹಿತಿ ಕಿವಿ ಮುಟ್ಟುತಿದ್ದಂತೆ, ಸಿಡಿಪಿಓ ಮಾಧವನ್,ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ಚಿಕಿತ್ಸೆ ಕೊಡಿಸಿದ್ದಾರೆ.ಹೆಚ್ಚಿನ ಚಿಕಿತ್ಸೆಗಾಗಿ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದರಿ ಅಂಗನವಾಡಿ ಕಟ್ಟಡವನ್ನ ಸಿಡಿಪಿಓ ಹಾಗೂ ಪಿಡಿಒ ಅವರ ಸಮ್ಮುಖದಲ್ಲಿ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಅಂಗನವಾಡಿ ಕಟ್ಟಡ ನಿರ್ಮಿಸಿದ,ಜೆ ಯಿ ಮತ್ತು ಕಾಂಟ್ರಾಕ್ಟರ್ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಕೂಲಿ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಅಲ್ದಾರ್ತಿ ಸೇರಿದಂತೆ ಪ್ರಗತಿಪರ ಸಂಘಟನೆಗಳು ಪಟ್ಟು ಹಿಡಿದಿದ್ದಾರೆ.
