ಅಥಣಿ ಪೊಲೀಸರಿಂದ ‘ನಂಬರ್ ಪ್ಲೇಟ್ ಇಲ್ಲದ ವಾಹನ’ಗಳ ವಿರುದ್ಧ ವಿನೂತನ ಕಾರ್ಯಾಚರಣೆ

ಅಥಣಿ :ಪೊಲೀಸ್ ಅಧಿಕಾರಿಗಳೀಂದ ವಿನೂತನ ಕಾರ್ಯಾಚರಣೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ, ಅಂತಹ ಅಪರಾಧ ಕೃತ್ಯಗಳಿಗೆ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಅಪರಾಧ ಕೃತ್ಯಗಳನ್ನು ಮಾಡುತ್ತಾ ಪಾರಾಗುತ್ತಿದ್ದಾರೆ. ಇತ್ತ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು, ಇದನ್ನು ತಡೆಯಲು ವಿನೂತನ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಅಥಣಿಯ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಅವರ ನೇತೃತ್ವದಲ್ಲಿ ನಂಬರ್ ಪ್ಲೇಟ್ ಮತ್ತು ಹೆಲ್ಮೆಟ್ ಇಲ್ಲದೆ ರಸ್ತೆಗಿಳಿದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ವಾಹನ ಮಾಲೀಕರಿಂದ ಯಾವುದೇ ರೀತಿಯ ದಂಡ ವಿಧಿಸದೇ ತಮ್ಮ ವಾಹನದ ದಾಖಲೆ ಮತ್ತು ನೊಂದಾಯಿತ ಸಂಖ್ಯೆಯನ್ನು ತಂದು ಖಚಿತಪಡಿಸಿ ವಾಹನ ತೆಗೆದುಕೊಂಡು ಹೋಗಿ ಎಂದು ನಿಯಮವನ್ನು ಅನ್ವಯಿಸಿದ್ದಾರೆ.ಈ ವಿನೂತನ ವಿಧಾನದಿಂದ, ಅಪರಾಧ ಕೃತ್ಯಗಳಿಗೆ ವಾಹನಗಳನ್ನು ಬಳಸುವವರ ಮೇಲೆ ನಿಗಾ ಇಡುವುದು ಹಾಗೂ ಅಪರಾಧಿಗಳನ್ನು ಪತ್ತೆಹಚ್ಚುವುದು ಸುಲಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
