ಗಜ ಚಿತ್ರದ ನಟಿ ನವ್ಯಾ ನಾಯರ್ ” 1.14 ಲಕ್ಷದ ರೂ ಮಲ್ಲಿಗೆ ಹೂವನ್ನ ನಾನು ಮುಡಿದುಕೊಂಡಿದ್ದೆ “ಕನ್ನಡ ಚಿತ್ರರಂಗದ ಸೂಪರ್ ಹಿಟ್ ಮೂವಿ ಗಜ ಚಿತ್ರದ ನಾಯಕಿ ನಟಿ ನವ್ಯಾ ನಾಯರ್ ಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ ಹಾಕಲಾಗಿದೆ. ಮಲ್ಲಿಗೆ ಹೂಗಳನ್ನು ಕೊಂಡೊಯ್ದಿದ್ದಕ್ಕಾಗಿ ನಟಿ ನವ್ಯಾ ನಾಯರ್ ಅವರಿಗೆ ಸುಮಾರು 1.14 ಲಕ್ಷ ದಂಡ ವಿಧಿಸಲಾಗಿದೆ. ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್ನ ಓಣಂ ಆಚರಣೆಯಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.ಆ ಕಾರ್ಯಕ್ರಮಕ್ಕಾಗಿ ನಾನು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಹೂವುಗಳನ್ನು ಧರಿಸಿದ್ದೆ ಎಂದು ನವ್ಯಾ ತಮಾಷೆ ಮಾಡಿದ್ದು,ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡುವ ಮೊದಲು ತನ್ನ ತಂದೆ ಉಡುಗೊರೆಯಾಗಿ ನೀಡಿದ 15 ಸೆಂ.ಮೀ ಉದ್ದದ ಮಲ್ಲಿಗೆ ಹೂವಿನ ಹಾರವನ್ನು ತೆಗೆದುಕೊಂಡು ಹೋಗಿದ್ದೆ. ಆ ದೇಶದ ನಿಯಮಗಳ ಅರಿವಿಲ್ಲದೆ ವಿಮಾನ ನಿಲ್ದಾಣದ ಫಾರಂನಲ್ಲಿ ಮಲ್ಲಿಗೆ ಹೂ ತೆಗೆದುಕೊಂಡು ಹೋಗುವ ಬಗ್ಗೆ ಯಾವುದೇ ಘೋಷಣೆ ಮಾಡಿರಲಿಲ್ಲ. ಇದು ದಂಡಕ್ಕೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
