ಹುಬ್ಬಳ್ಳಿ : ನಗರದ ದುರ್ಗದ ಬೈಲ್ ಮಾರುಕಟ್ಟೆಯ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆಯ ಟೆಂಡರ್ ಪಡೆದ ವೆಂಕಟ ಎಂಬುವವರ ವ್ಯಕ್ತಿ ಅವಾಜ್ ಹಾಕಿ ಅವಾಚ್ಯ ಶಬ್ದಗಳಿಂದ ಮಾತನಾಡಿದ ಘಟನೆ ನಡೆದಿದೆ. ʼಟೆಂಡರ ಪಡೆದ ವ್ಯಕ್ತಿ ನಾನು, ಯಾರಿಗೂ ಹೆದರುವನಲ್ಲ ಬೇಕಾದವರನ್ನು ಕರೆದು ಕೊಂಡು ಬಾ, ಪಾಲಿಕೆ ಸದಸ್ಯರಿಗೆ, ಮಹಾಪೌರರಿಗೆ ಆಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನಾನು 50 ಲಕ್ಷ ಕೊಟ್ಟು ಟೆಂಡರ ಪಡೆದಿದ್ದೆನೆ ಎಂದು ವ್ಯಾಪಾರಸ್ಥರಿಗೆ ಆವಾಜ಼್ ಹಾಕಿದ್ದಾನೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಿಂದ ಬಂದು ಮಾವಿನ ಎಲೆ, ಬಾಳೆಎಲೆ ವ್ಯಾಪಾರ ಮಾಡುವ ಬಡ ರೈತರಿಗೆ ಮುಲಾಜಿಲ್ಲದೆ ಒಂದು ತಾಸಿಗೆ ನೂರು ರೂಪಾಯಿಗಳನ್ನು ಪಡೆದಿದ್ದಾನೆ.ಮಹಾನಗರ ಪಾಲಿಕೆಯ ಟೆಂಡರ್ ಪಡೆದು ಬಡ ವ್ಯಾಪಾರಿಗಳ ಮೇಲೆ ಈ ರೀತಿ ಅವಾಜ್ ಹಾಕಿ ಅಂಗಡಿ ತೆರವುಗೊಳಿಸುವಂತೆ ರಾಕ್ಷಸನ ರೀತಿಯಲ್ಲಿ ವರ್ತಿಸುವುದಲ್ಲದೆ, ಯಾವುದೇ ರೀತಿಯ ಪರವಾನಗಿ,ಗುರುತಿನ ಚೀಟಿ ಇಲ್ಲದೆ ಗುಂಡಾ ರೀತಿ ವರ್ತನೆ ತೋರಿರುವುದು ಎಷ್ಟು ಸರಿ ಎಂದು ಅಲ್ಲಿನ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಯವರು ಪಾಲಿಕೆ ಅಧಿಕಾರಿಗಳಿಗೆ ಸ್ಥಳದಲ್ಲಿ ಕರೆಯಿಸಿ ಕೂಡಲೇ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಒತ್ತಾಯಿಸಿದರು
