ಹುಬ್ಬಳ್ಳಿ: ಹುಬ್ಬಳ್ಳಿ ಜನರೇ..! ನಿಮ್ಮ ಮನೆಯ ಹೊರಗೆ ಇಟ್ಟ ವಸ್ತಗಳ ಬಗ್ಗೆ ಇರಲಿ ಜಾಗ್ರತೆ. ಮಳ್ಳರಂತೆ ಬಂದು ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ಇಲ್ಲಿಬ್ಬರು ಕಳ್ಳರು ಸಾಮಾನ್ಯರಂತೆ ಬಂದು ಮನೆ ಹೊರಗೆ ಇಟ್ಟಿದ್ದ ಪ್ಲಾಸ್ಟಿಕ್ ಪದಾರ್ಥಗಳು, ಗ್ಯಾಸ್ನ್ನು ಎತ್ತಕೊಂಡು ಹೋಗಿರುವ ಘಟನೆ ಹುಬ್ಬಳ್ಳಿ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇಪೇಟ್ನಲ್ಲಿ ನಡೆದಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಹೀಗೆ ಇಬ್ಬರೂ ಕಳ್ಳರು ಅಮಾಯಕರಂತೆ ಬಂದು, ಹಿರೇಪೇಟ್ದಲ್ಲಿರುವ ಕಾಲೆಬುಡಗಡಿ ಕಾಂಪ್ಲೆಕ್ಸ್ ಅಂಡರ್ಗ್ರೌಂಡ್ ಹೋಗಿದ್ದಾರೆ. ಆ ಕಾಂಪ್ಲೆಕ್ಸ್ ಕೆಳಗೆ ಇಟ್ಟಿದ್ದ ಗ್ಯಾಸ್ನ್ನು ಎತ್ತುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದಕ್ಕಾಗಿ ಸಾರ್ವಜನಿಕರೇ ಹುಷಾರ್ ಆಗಿರಿ. ನಿಮ್ಮ ಮನೆ ಹತ್ತಿರ ಯಾರಾದ್ರೂ ಅಪರಿಚಿತರು ಬಂದ್ರೆ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ.
