ಜಗಳೂರು : ನಾಡ ಹಬ್ಬ ವಿಶ್ವವಿಖ್ಯಾತ ದಸರಾ ಹಬ್ಬದ ಸಂಭ್ರಮದ ಪ್ರಯುಕ್ತ ಬನ್ನಿ ತೆಗೆದುಕೊಂಡು ಬಂಗಾರದAತೆ ಜೀವಿಸೋಣ ಎಂಬ ಸಂದೇಶವನ್ನು ಸಾರಿದ್ದಾರೆ.ಜಗಳೂರು ಪಟ್ಟಣದ ಬನ್ನಿ ಮಂಟಪದ ಬಳಿಯಿರುವ ಬನ್ನಿ ಮರಕ್ಕೆ ವಿಶೇಷ ಪ್ರಜೆ ಸಲ್ಲಿಸಿ ಪ್ರಜಾ ಕೈಂರ್ಯಗಳನ್ನು ನೆರವೇರಿಸಿ ಭಕ್ತರೊಂದಿಗೆ ಬನ್ನಿ ಎಲೆ ವಿನಿಮಯ ಮಾಡುವ ,ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಕೂಡಿದ್ದು ತಹಶೀಲ್ದಾರ್ ಅಧಿಕಾರಿಯಾದ ಸೈಯದ್ ಖಲೀಂ ಉಲ್ಹಾ ರವರಿಂದ ವಿಶೇಷ ಪ್ರಜೆ ಸಲ್ಲಿಸಿ ಅಂಬುವನ್ನು ಛೇಧಿಸಿದರು. ನಗರದ ರಾಮ ದೇವರು ಪ್ರಮುಖ ರಸ್ತೆಯಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬನ್ನಿಮರದ ಮೈದಾನಕ್ಕೆ ತೆರಳಿದವ ಮೂಲಕ ದೇವರುಗಳಿಗೆ ಹಾಗೂ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ. ಬಾಳೆ ಕಂದನ್ನು ಕತ್ತರಿಸುವ ಮೂಲಕ ಬನ್ನಿ ಮುಡಿದರು, ನಂತರ ಭಕ್ತರು ಬನ್ನಿ ಮರದ ಎಲೆಗಳೊಂದಿಗೆ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಕೋರಿದರು. ಈ ಸಂರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ್ .ಪಪಂ ಸದಸ್ಯರಾದ ಮುಖಂಡರಾದ ವೆಂಕಟೇಶರೆಡ್ಡಿ.ಮಹೇಶ್ ವಿವಿದ ಭಕ್ತಾದಿಗಳು . ಸರ್ವಜನಿಕರು ಪಾಲ್ಗೊಂಡಿದ್ದರು.
