

ಹಾವೇರಿ : ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಯ ಉಪ- ತಹಶೀಲ್ದಾರ್ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿದ್ದಾರೆ. ಯಳವಟ್ಟಿಯ ಗಂಗಾಧರ್ ಎಂಬುವರ ವಂಶವೃಕ್ಷ ಪಡೆಯಲು ಅರ್ಜಿ ಹಾಕಿದ್ದರು. ಅರ್ಜಿ ಸಂಬಂಧ ಪಟ್ಟ ದಾಖಲೆಯನ್ನು ಪೂರೈಸಲು ಉಪ ತಹಶೀಲ್ದಾರ ನಾಗರಾಜ್ ಸೂರ್ಯವಂಶಿ ೧೫೦೦೦ ರೂಪಾಯಿ ಹಣ ಬೇಡಿಕೆ ಇಟ್ಟಿದ್ದು, ಸದ್ಯ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿದ್ದಾರೆ.
ಯಳವಟ್ಟಿಯ ಗಂಗಾಧರ್ ಎಂಬ ವ್ಯಕ್ತಿಯು ವಂಶವೃಕ್ಷ ಪಡೆಯಲು ಅರ್ಜಿ ಹಾಕಿದ್ದು, ಉಪ ತಹಶೀಲ್ದಾರ್ ನಾಗರಾಜ್ ಸೂರ್ಯವಂಶಿ 2000 ಹಣವನ್ನ ಮುಂಗಡವಾಗಿ ಪಡೆಯುವಾಗ ಬೊಮ್ಮನಹಳ್ಳಿ ನಾಡ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಶ್ರೀ ಎಂ.ಎಸ್.ಕೌಲಾಪುರೆ ಲೋಕಾಯುಕ್ತ ಪೊಲೀಸ್ ಅಧೀರೀಕ್ಷಕರು ದಾವಣಗೆರೆ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದು, ಮಧುಸೂದನ್ರವರ ತಂಡದಿಂದ ಯಶಸ್ವಿಯಾಗಿ ಉಪ ತಹಶೀಲ್ದಾರ್ ನಾಗರಾಜ್ ಸೂರ್ಯವಂಶಿ ಮತ್ತು ಕಿರಣ್ರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ -1 ಉಪ ತಹಶೀಲ್ದಾರ್ ನಾಗರಾಜ್ ಸೂರ್ಯವಂಶಿ
ಆರೋಪಿ -2 ಕಂಪ್ಯೂಟರ್ ಆಪರೇಟರ್ ಕಿರಣ್ ಮುದಕಣ್ಣ
