ಮೈಸೂರ-ಮಂಗಳೂರು ಹೆದ್ದಾರಿ ಬಳಿ ಖಾಸಗಿ ಬಸ್- ಸಿಮೆಂಟ್ ಲಾರಿ ಮುಖಾಮುಖಿ ಯಾಗಿ ಡಿಕ್ಕಿ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವು, ಕೆಲವರು ಗಂಭೀರ ಗಾಯಗೊಂಡಿದ್ದಾರೆ
ಹುಣಸೂರು: ಮೈಸೂರ-ಮಂಗಳೂರು ಹೆದ್ದಾರಿ ಬಳಿ ಖಾಸಗಿ ಬಸ್- ಸಿಮೆಂಟ್ ಲಾರಿ ಮುಖಾಮುಖಿ ಯಾಗಿ ಡಿಕ್ಕಿ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವು, ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಡಗನಕೊಪ್ಪಲು ಗೇಟ್ ಬಳಿ ಘಟನೆ ಸಂಭವಿಸಿದೆ.ಕ್ಯಾಲಿಕಟ್ನಿಮದ ಬೆಂಗಳುರಿಗೆ ತೆರಳುತ್ತಿದ್ದ ಖಾಸಗಿ ಬಸ್ವೊಂದು ನಸುಕಿನ ವೇಳೆ ನಿದ್ರೆಯಲ್ಲಿ ವಾಹನ ಚಲಾಯಿಸುತಿದ್ದ ಚಾಲಕ ರಸ್ತೆ ಬಳಿ ಬಿದ್ದಿದ್ದ ಮರದ ದಿಮ್ಮಿಗೆ ಡಿಕ್ಕಿ ಹೊಡೆತವನ್ನು ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಸಿಮೆಂಟ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ನಜ್ಜು-ಗುಜ್ಜಾದ ಬಸ್ ಮುಂಭಾಗ, ಪಲ್ಟಿಯಾಗಿ ರಸ್ತೆ ಮೇಲೆ ಬಿದ್ದ ಸಿಮೆಂಟ್ ಲಾರಿ. ಅಪಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಸಾವು, ಲಾರಿಯ ಚಕ್ರದಡಿ ಸಿಲುಕಿದ ಬಸ್ ಚಾಲಕನ ಶವ, ಇದೇ ಸಂದರರ್ಭದಲ್ಲಿ ದುರಾದೃಷ್ಟವಶಾತ್ ಬೆಂಗಳೂರಿಗೆ ತೆರಳುತ್ತಿದ್ದ ಮಹಿಳೆ ಕೂಡಾ ಅಪಘಾತದಲ್ಲಿ ಅಸುನೀಗಿದ್ದಾರೆ. ಇನ್ನುಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳು ಆಗಿದ್ದುಮ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ಬಿಳಿಕೆರೆ ಹುಣಸೂರು ನಗರ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆ ಸಂಬಂಧ ಮಾಹಿತಿ ಪಡೆದಿದ್ದಾರೆ. ಸ್ಥಳದ ತನಿಖೆಕಾರಣ ಬೆಳಿಗ್ಗೆ ೮ ಗಂಟೆ ವರೆಗೆ ಸಂಚಾರ ಕೆರ ಕಾಲ ನಿರ್ಬಂಧ ಮಾಡಲಾಗಿತ್ತು. ಕೇರಳ ಹಾಗೂ ಕೊಡಗಿನಿಂದ ಬರುವ ಲಾರಿ ಗಳನ್ನು ಹುಣಸೂರು .ಕೆಆರ್ ನಗರ. ಬಿಳಿಕೆರೆ ಬೈಪಾಸ್ ಬದಲಿ ಮಾರ್ಗಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
