ಗದಗ : ಗದಗದ ಲಕ್ಷ್ಮೇಶ್ವರ ದಿಂದ ಕಲ್ಲಾಗನೂರು ಮಾರರ್ಗವಾಗಿ ಹೊರಟ ಕೆ ಎ42 ಎಫ್1571 ಬಸ್ ದೊಡ್ಡೂರು ಸೂರಣಗಿ ಮಧ್ಯ ಚಾಲಕ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆಯೊಂದು ನಡೆದಿದೆ. ಕಲ್ಲಾಗನೂರು ಮಾರ್ಗವಾಗಿ ಹೊರಟ ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ತಿರುಗಿ ಕಂದಕ್ಕಕ್ಕೆ ಉರುಳಿದೆ. ಬಸ್ಸಿನಲ್ಲಿ ಸುಮಾರು 25 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಸ್ಸು ಕಂದಕ್ಕಕ್ಕೆ ಜಾರುತ್ತಿದ್ದಂತೆ ಗಾಬಾರಿಗೊಂಡ ಪ್ರಯಾಣಿಕರು ಕೂಗಾಟ ಮಾಡತೊಡಗಿದರು. ತುರ್ತು ಬಾಗಿಲು ಮುರಿದು ಪ್ರಯಾಣಿಕರು ಪಾರಾಗಿದ್ದಾರೆ. ಬಸ್ಸಿನಿಂದ ಜಿಗಿಯುವ ಸಂದರ್ಭದಲ್ಲಿ ಸೂರಣಗಿ ಗ್ರಾಮದ ಗಂಗವ್ವ ಲಮಾಣಿ, ಈರಪ್ಪ ಡಾಕಪ್ಪ ಲಮಾಣಿ, ಮತ್ತು ಬಾಲೇಹೊಸೂರಿನ ಶಿವಪ್ಪ ಅರಕೇರಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು,ಗಾಯಾಳುಗಳಿಗೆ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

