ಕೊಪ್ಪಳ : ಕುಕನೂರು ಪೊಲೀಸ್ ಠಾಣೆಗೆ ತನ್ನ ಸಂಬಂಧಿಕರ ಕೌಟುಂಬಿಕ ದೂರಿನ ವಿಚಾರವಾಗಿ ಠಾಣೆಗೆ ಬಂದಾಗಪಿಎಸ್ಐ ಗುರುರಾಜ ಅವಾಚ್ಯ ಶಬ್ದಗಳನ್ನು ಬಳಸಿ ಅನುಚಿತ ವರ್ತೆನೆ ತೋರಿಸಿ ಗೂಡಾ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾ ದೃಷ್ಯದಲ್ಲಿ ಸೆರೆಯಾಗಿದ್ದು, ಇದರಿಂದ ನಮ್ಮ ಅಮಾಯಕ ದಲಿತರ ಮೇಲೆ ಹಲ್ಲೆ ಧೋರಣೆ ಮಾಡಿರುವ ಹಿನ್ನೆಲೆ ಎಲ್ಲಾ ಪ್ರತಿಭಟನಾಕಾರರು ಹಲಗೆ ಬಾರಿಸುವ ಮೂಲಕ ಪಿಎಸ್ಐ ಗುರುರಾಜ್ ಅಮಾನತ್ತು ಮಾಡುವಂತೆ ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರತಿಭಟನೆ ನಿಲ್ಲದ ಕಾರಣ ಸ್ಥಳಕ್ಕೆ ಆಗಮಿಸಿದ ಸಿಪಿಐ, ಡಿವೈಎಸ್ಪಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ರವರು ಮಾತನಾಡಿ ಪಿಎಸ್ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಆದರೆ ಇದು ದಲಿತ ಮುಖಂಡರಿಗೆ ಇದು ನಮಗೆ ಸೂಕ್ತ ಕ್ರಮವಲ್ಲ ಈ ಕೂಡಲ ಅವರ ಮೇಲೆ ಎಫ್ ಐ ಆರ್ ದಾಖಲಿಸಿ ಸಸ್ಪೆಂಡ್ ಆಗುವ ತನಕ ಈ ಧರಣಿ ಹೀಗೆ ಇರುತ್ತದೆ ಇಲ್ಲವಾದಲ್ಲಿ ನಾವು ಉಗ್ರ ಹೋರಾಟವನ್ನು ಮಾಡಲು ಹಿಂದೆ ಹಾಕುವುದಿಲ್ಲ ಎಂದು ದಲಿತ ಮುಖಂಡರು ಹೇಳಿದ್ದಾರೆ.
