ಬೆಂಗಳೂರು : ಬೆಂಗಳೂರಿನಲ್ಲಿ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರತಿಭಾವಂತ ಚರ್ಮ ರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಎಂಬ ವೈದ್ಯೆಯನ್ನು ಇದೇ ಏಪ್ರಿಲ್೨೪ ೨೦೨೫ ರಂದು ತನ್ನ ಗಂಡನಾದ ಡಾ. ಮಹೇಂದ್ರ ರೆಡ್ಡಿ ಜನರಲ್ ಸರ್ಜನ್, ಪ್ರೊಫೋಪೋಲ್ ಅನಸ್ತೇಶಿಯಾ ಓವರ್ಡೋಸ್ ಆಗಿ ನೀಡಿ ಕೊಲೆ ಮಾಡಿದ್ದಾನೆ.
ಪತ್ನಿ ಸಾವಿನ ನಂತರ ಶವದ ಎಫ್ಎಸ್ಎಲ್ ವರದಿಯನ್ನು ಕುಟುಂಬದಿAದ ಮುಚ್ಚಿಟ್ಟಿದ್ದ ವೈದ್ಯ ಮಹೇಂದ್ರ ರೆಡ್ಡಿ. ನಂತರ ಪತ್ನಿ ಕುಟುಂಬದವರು ತನ್ನ ಮಗಳ ಸಾವಿನ ಬಗ್ಗೆ ಅನುಮಾನ ಉಂಟಾಗಿದ್ದು, ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಗಳ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪುನಃ ಕೇಸ್ ತೆರೆಸಿ ಮಗಳ ಸಾವಿನ ಬಗ್ಗೆ ತನಿಖೆ ಮಾಡಬೇಕೆಂದು ಪೋಷಕರು ಮನವಿ ಮಾಡಿಕೊಂಡರು. ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ ಪೊಲೀಸ್ ಇಲಾಖೆಯು ಎಫ್ಎಸ್ಎಲ್ ವರದಿ ಮೂಲಕ ತನಿಖೆಯನ್ನು ಆರಂಭಿಸಿ ಪತಿ ವಿರುದ್ಧ ನ್ಯಾಯಾಂಗ ಕ್ರಮವನ್ನು ತೆಗೆದುಕೊಂಡು
ವೈದ್ಯಕೀಯ ಜ್ಞಾನವನದನು ತನ್ನ ದುರ್ಬುದ್ಧಿಯಿಂದ ದುರುಪಯೋಗಪಡಿಸಿಕೊಂಡು ಮಾಡಿರುವ ಕೆಲಸವಾಗಿದ್ದು, ಇದನ್ನು ನ್ಯಾಯಾಲಯವು ಹತ್ಯೆ ಎಂದು ದೃಢಪಡಿಸಿ ಡಾ.ಮಹೇಂಧ್ರ ರೆಡ್ಡಿಯನ್ನು ಬಂಧನಗೊಳೊಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಕುಟುಂಬಸ್ಥರು ತನ್ನ ಮಗಳ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ, ಇದರ ವಿಚಾರವಾಗಿ ಲೋಕಲ್ ಪೊಲೀಸ್ ಇಲಾಖೆಯು ದುರಂತದ ಬಗ್ಗೆ ಸಕಲ ಮಾಹಿತಿಯನ್ನು ಕಲೆ ಹಾಕಿ ಪ್ರಕರಣದ ವಿಚಾರವಾಗಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
