ಗದಗ : ಗದಗದ ಲಕ್ಷ್ಮೇಶ್ವರ ತಾಲ್ಲೂಕು ಸೇರಿದಂತೆ ಗದಗದ ಜಿಲ್ಲಾದ್ಯಂತ ಸುರಿದ ಮಳೆಗೆ ರೈತರು ಬೆಳೆದ ಗೋವಿನ ಜೋಳ ಸಂಪೂರ್ಣ ನೆಲ ಕಚ್ಚಿದ ಪರಿಣಾಮವಾಗಿ ಬಿದ್ದಲ್ಲೆ ಮೊಳಕೆಯೊಡೆಯುವ ಸ್ಥಿತಿಯಲ್ಲಿ ರಾಶಿ ರಾಶಿ ಜೋಳ ಬಿದ್ದಿದೆ.
ಈ ಬಾರಿಯ ಮುಂಗಾರು ಮಳೆಗೆ ಅತೀವೃಷ್ಟಿಯಿಂದ ಬೆಳೆ ಹಾಳಾದ ಪರಿಣಾಮ ಮಳೆಗೆ ಸಿಲುಕಿದ ಅಳಿದು ಉಳಿದ ಬೆಳೆಗಳು ಭೂಮಿ ಪಾಲಾಗಿದೆ, ಸರ್ಕಾರ ಮತ್ತು ಬೆಳೆ ವಿಮಾ ಓರಿಯೆಂಟಲ್ ಕಂಪನಿಗಳು ಈ ಭಾಗದ ರೈತರಿಗೆ ಬಹಳಷ್ಟು ಅನ್ಯಾಯ ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವರ್ಷ ಮುಂಗಾರು ಬೆಳೆಯು ಚೆನ್ನಾಗಿ ಹುಲಸಾಗಿ ಬಂದಿದ್ದು, ಕೈ ಸೇರಿತು ಅನ್ನುವಷ್ಟರಲ್ಲಿ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಗೋವಿನ ಜೋಳವು ರೈತರ ಕೈಹಿಡಿಯುತ್ತದೆ ಎಂದುಕೊಂಡ ರೈತರು ತಮ್ಮ ಜಮೀನಲ್ಲೇ ಗೋವಿನಜೋಳ ಮೊಳಕೆ ಒಡೆಯುತ್ತಿದ್ದರೆ ,ಸತತ ಒಂದು ವಾರ ಸುರಿಯುತ್ತಿರುವ ಮಳೆಗೆ ಬೆಳೆ ಹಾಳಾಗಿದೆ,ಇದರಿಂದ ರೈತರು ಇನ್ನಷ್ಟು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸಿತ್ಥಿ ನಿರ್ಮಾಣವಾಗಿದ್ದು ಸರಕಾರ ಬೆಳೆ ಹಾನಿ ಬೆಳೆ ವಿಮೆ ಇನ್ನೂ ಯಾಕೆ ಹಾಕಿಲ್ಲ ಎನ್ನುವ ಪ್ರಶ್ನೆ ರೈತರಲ್ಲಿ ಮನೆ ಮಾಡಿದೆ. ಮತ್ತು ಕೂಡಲೆ ರೈತರ ನಷ್ಟವನ್ನು ತುಂಬಿಕೊಡಬೇಕೆಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ
