ಎಚ್ ಡಿ ಕೋಟೆ: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯ ಸರಗೂರು ತಾಲೂಕಿನಲ್ಲಿ ನರಹಂತಕ ವ್ಯಾಘ್ರ ಮತ್ತೊಂದು ಬಲಿ ಪಡೆದಿದೆ. ಗದ್ದೆಯಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ದಾಳಿ ನಡೆಸಿ ಎಳೆದೊಯ್ಯುವಲ್ಲಿ ವಿಫಲವಾಗಿದೆ.
ಬಡಗಲಪುರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ನರಹಂತಕ ಹುಲಿಗೆ ಮುಳ್ಳೂರಿನ ರೈತ ಬಲಿಯಾಗಿದ್ದಾನೆ.ಗ್ರಾಮದ ರಾಜಶೇಖರ ಮೂರ್ತಿ (55 ಬಲಿಯಾದ ರೈತ. ಭಾನುವಾರ ಮಧ್ಯಾಹ್ನ ಜಮೀನಿನಲ್ಲಿ ಜಾನುವಾರುಗಳನ್ನು ಮೇಯುಸುತ್ತಿದ್ದ ವೇಳೆ ಏಕಾಏಕಿ ವ್ಯಾಘ್ರವೊಂದು ದಾಳಿ ಮಾಡಿದಂತಹ ಸಂದರ್ಭದಲ್ಲಿ ದೇಹದ ಕೆಲ ಭಾಗಗಳಲ್ಲಿ ಮತ್ತು ಮುಖದ ಭಾಗದಲ್ಲಿ ಪರಚಿರುವ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಾಳಿ ನಡೆಸಿ ಕಂದ 10 ಕಿ.ಮೀ ದೂರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅರಣ್ಯ ಸಚಿವರ ಗಮನಕ್ಕೆ ತಂದರೂ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ, ನಿರ್ಲಕ್ಷ್ಯವಹಿಸಿದ್ದರಿಂದ ಸಾರ್ವಜನಿಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಸಚಿವರು ಸ್ಥಳಕ್ಕೆ ಬಂದು ಮೃತ ರೈತರ ಕುಟುಬಕ್ಕೆ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ತದ ನಂತರ ಮೃತ ದೇಹವನ್ನು ತೆಗೆದುಕೊಂಡು ಹೋಗಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಳ್ಳೂರು ಗ್ರಾಮದ ಸಮೀಪ ಯಾವುದೇ ಕಾಡು ಪ್ರದೇಶ ಇಲ್ಲದಿದ್ದರೂ ವ್ಯಾಘ್ರನ ದಾಳಿ ಆತಂಕ ಸೃಷ್ಟಿಸಿದೆ. ಬಡಗಲಪುರ ಗ್ರಾಮದಲ್ಲಿ ದಸರಾ ಆನೆಗಳ ನೆರವಿನಿಂದ ಕೊಂಬಿಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನ ಸೆರೆ ಹಿಡಿಯಲಾಗಿತ್ತು. ಹುಲಿ ಸೆರೆಯಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು.
