ಬೆಳಗಾವಿ : ರಾಜ್ಯದಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗಧಿಪಡಿಸುವಂತೆ ಕಳೆದ ವಾರದಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ದಿನಗಳಲ್ಲಿ ಹಲವು ಸಚಿವರು ಸಂಧಾನ ಸಭೆಯನ್ನು ಕರೆದು ಮಾತನಾಡಿ ರೈತರ ಮನವೊಲಿಸಲು ಪ್ರಯತ್ನ ಮಾಡಿದರೂ ರೈತರು ಒಪ್ಪದೆ ಸೂಕ್ತ ಬೆಂಬಲ ಬೆಲೆ ನಿಗಧಿಪಡಿಸುವುದಕ್ಕೆ ಪಟ್ಟು ಹಿಡಿದು ಕುಳಿತಿದ್ದಾರೆ.
ಇದರ ಬಗ್ಗೆ ಕ್ಯಾಬಿನೆಟ್ನಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದು ಈ ವಿಚಾರವಾಗಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಪ್ರಧಾನ ಮಂತ್ರಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಬಗೆಹರಿಸಲು ತುರ್ತು ಚರ್ಚೆಗೆ ಕೋರಿ ಮೋದಿಗೆ ಸಿಎಂ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಉತ್ತರ ಕರ್ನಾಟಕದ ಭಾಗದ ಕಬ್ಬು ಬೆಳೆಗಾರರು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಟನ್ಗೆ 3,500 ರೂಪಾಯಿ ದರ ನಿಗಧಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ, ಇದರ ಕುರಿತು ರೈತರು ಮತ್ತು ಕಾರ್ಖಾನೆ ಮಾಲೀಕರ ಜೊತೆ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ನಾವು ಪ್ರತಿ ಟನ್ಗೆ 3,200 ರೂಪಾಯಿ ನಿಗಧಿಪಡಿಸಿದರೆ ಕೇಂದ್ರ ಸರ್ಕಾರ ಕ್ವಿಂಟಾಲ್ಗೆ 3,500 ರೂ ದರ ನಿಗಧಿಪಡಿಸಿದೆ.
ಇನ್ನು ಇದಲ್ಲದೆ ರೈತರು ಬೆಳೆ ಸಾಗಾಣಿಕೆ ವೆಚ್ಚ,ಕಟಾವು ವೆಚ್ಚ ಸೇರಿದಂತೆ ರೈತರಿಗೆ 2,600 ರಿಂದ 300 ರೂಪಾಯಿ ತಲುಪುತ್ತದೆ. ಮತ್ತೊಂದೆಡೆ ರಾಜ್ಯದಿಂದ ಕೇಂದ್ರ ಎಥೆನಾಲ್ ಖರೀದಿ ಮಾಡುವುದು ಕಡಿಮೆಯಾಗಿದೆ , ಹೀಗಾಗಿ ಕೇಂದ್ರ ಪ್ರತಿ ಟನ್ಗೆ 3,500 ರೂ.ದರ ನಿಗಧಿಪಡಿಸುವಂತೆ ಆದೇಶ ಮಾಡುವಂತೆ ಪ್ರಧಾನ ಮಂತ್ರಿ ಮೋದಿರವರಿಗೆ ಪತ್ರ ಬರೆದಿದ್ದಾರೆ.
