
ಬೆಂಗಳೂರು: ಸಿಎಂ ಖುರ್ಚಿಗಾಗಿ ಸ್ವಪಕ್ಷದಲ್ಲಿ ಆಂತರಿಕ ಕಲಹ ನಡೆಯುತ್ತಿರುವುದಲ್ಲದೆ, ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. 2028ಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೋದು ಪಕ್ಕಾ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಚರ್ಚೆಯಾಗುತ್ತಿರುವ ಸಿಎಂ ಖುರ್ಚಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಮುಂದಿನ 5 ವರ್ಷಗಳ ಕಾಲ ಸಿದ್ದರಾಮಯ್ಯರವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಸದ್ಯ ಮುಖ್ಯಮಂತ್ರಿ ಸ್ಥಾನ ಮತ್ತು ಎಐಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ,
ಡಿಸಿಎಂ ಡಿಕೆ ಶಿವಕುಮಾರ್ರವರು 2028ಕ್ಕೆ ಸಿಎಂ ಆಗಲಿ ಎಂದು ಎಐಸಿಸಿ ಅಧ್ಯಕ್ಷರ ಮನೆ ಮುಂಧೆ ನಿಂತು ಹೇಳುತ್ತಿದ್ದೇನೆ ಎಂದು ಸಚಿವ ಜಮೀರ್ ಹೇಳಿಕೆ ನೀಡಿದ್ದಾರೆ.
ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಸಿದ್ಧರಾಮಯ್ಯರವರು 2028ರವರೆಗೆ ಸಿಎಂ ಆಗಲಿ, ಅವರು ಸಿಎಂ ಆಗಿರುವ ವಿಚಾರದಿಂದ ನಮಗೇನು ಬೇಸರವಿಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರು 2028ಕ್ಕೆ ಸಿಎಂ ಆಗಬೇಕು ಅಲ್ಲಿವರೆಗೆ ಸಿದ್ಧರಾಮಯ್ಯರವರೇ ಸಿಎಂ ಆಗಿರ್ತಾರೆ ಎಂದು ಸಚಿವ ಜಮೀರ್ ಹೇಳಿಕೆ ನೀಡಿದ್ದಾರೆ.
