ನಾರಾಯಣಪುರ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ತಮ್ಮನ್ನು ಪವಾಡ ಪುರುಷ ವ್ಯಕ್ತಿಯೆಂದು ಗುರುತಿಸಿಕೊಂಡು ರಶೀದ್ ಮುತ್ಯ ಭಕ್ತರಿಗೆ ಸುಳ್ಳು ಭರವಸೆ ನೀಡಿ ವಂಚನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆ ಗ್ರಾಮಸ್ಥರು ವ್ಯಕ್ತಿಯನ್ನು ಅಟ್ಟಾಡಿಸಿ ಊರಿನಿಂದ ಬಹಿಷ್ಕರಿಸಿದ್ದಾರೆ. ನಿನ್ನೆ ಅಮಾವಾಸ್ಯೆ ಹಿನ್ನೆಲೆ ಹೊರಗಿನಿಂದ ಭಕ್ತರು ಬಂದಿದ್ದು, ಇತ್ತ ಗ್ರಾಮಸ್ಥರು ನಾಯಕ ಮಣಿಕಂಠ ರಾಥೋಡ್ – “ ನಮ್ಮ ಊರಿನಲ್ಲಿ ಇಂತಹ ಡೋಂಗಿ ಮುತ್ಯಾಗಳಿಗೆ ಅವಕಾಶವಿಲ್ಲ ಎಂದು ಹೇಳಿ ತಡೆದಿದ್ದಾರೆ.
ಡೋಗಿ ಸ್ವಾಮಿಜಿಯು ಹಲವರಿಗೆ , ಸುಳ್ಳೂ ಆಶ್ವಾಸನೆ ನೀಡುತ್ತಾ ಮಕ್ಕಳಿಲ್ಲದವರಿಗೆ ಮಕ್ಕಳು ಮಾಡಿಸುತ್ತೇನೆಂದು ವಂಚನೆ ಮಾಡಿದ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ರೀತಿಯ ಎಫ್ಐಆರ್ ದಾಖಲಿಸಿಲ್ಲ. ಘಟನೆ ಸಂಬಂಧಿತ ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
