
ಕೊಡಗು : ಕೊಡಗು ಜಿಲ್ಲೆಯಲ್ಲಿ ಮತ್ತೆ ಹೆಚ್ಚಾದ ವ್ಯಾಘ್ರ ದಾಳಿ . ಗರ್ಭೀಣಿ ಹಸು ಮೇಲೆ ದಾಳಿ ಮಾಡಿ ಕೊಂದುಹಾಕಿರುವ ಘಟನೆ ಪೊನ್ನಂಪೇಟೆಯ ಹಾತೂರು ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಹುಲ್ಲು ಮೇಯಲು ಕಟ್ಟಹಾಕಿದ ಸಂದರ್ಭದಲ್ಲಿ ಏಕಾ ಏಕಿ ಹಸು ಮೇಲೆ ದಾಳಿ ಮಾಡಿದ ಹುಲಿ. ದಾಳಿಗೆ ಸ್ಥಳದಲ್ಲೇ ಸಾವನ್ನಪ್ಪಿದ ಗರ್ಭಿಣಿ ಹಸು. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ವಿಭಾಗದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
