ಬೆಂಗಳೂರು: ಬೆಂಗಳೂರಿನ ಬಾಣಸವಾಡಿಯ ಸುಬ್ಬಣ್ಣಪಾಳ್ಯದ ಬಳಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು ಗಳ ಮೃತದೇಹ ಪತ್ತೆಯಾಗಿದೆ. ಪ್ರಕರಣ ಕುರಿತು ಬಾಣಸವಾಡಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ವಿಕಾಸ್ ಎಂಬುವರಿಂದ ಬಂದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಸ್ಥಳದಲ್ಲಿ ಶ್ವಾನ ಮತ್ತು ಬೆಕ್ಕಿನ ಮೃತದೇಹ ಸಿಕ್ಕಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಾಣಿಗಳ ದೇಹದಲ್ಲಿ ವಿಷ ಇದೆಯೇ ಅಥವಾ ಯಾವುದೇ ರೀತಿಯ ಗಾಯಗಳಾಗಿವೆಯೇ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕಿದೆ. ವರದಿ ಬಂದ ನಂತರ ವರದಿಯನ್ನಾಧರಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಿದ್ದೇವೆ ಎಂದು ಬಾನಸವಾಡಿಯ ಸುಬ್ಬಯ್ಯಪಾಳ್ಯದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
