ಶ್ರೀಹರಿಕೋಟ, ಜುಲೈ 18:- ಖಾಸಗಿಯಾಗಿ ತಯಾರಿಸಿದ ಭಾರತದ ಮೊದಲ ಬಾಹ್ಯಾಕಾಶ ನೌಕೆ, ರಾಕೆಟ್ ಸ್ಕೈರೂಟ್ ಏರೋಸ್ಪೇಸ್ ವಿಕ್ರಂ-1 (Skyroot Aerospace) ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಹೈದರಾಬಾದ್ನ ಖಾಸಗಿ ಸ್ಪೇಸ್ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಇಂದು ತನ್ನ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ವಿಕ್ರಮ್-1 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು. ಆ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಮಹತ್ವದ ಸಾಕ್ಷಿಯಾಯಿತು.
‘ಮಿಷನ್ ಆಗಮನ್’ ಹೆಸರಿನಲ್ಲಿ ಈ ರಾಕೆಟ್ ಉಡಾವಣೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ SDSC-SHARನ ಮೊದಲ ಲಾಂಚ್ ಪ್ಯಾಡ್ನಿಂದ ಇಂದು ಬೆಳಗ್ಗೆ 11:30 ಗಂಟೆಗೆ ಉಡಾವಣೆಯಾಗಬೇಕಿತ್ತು. ಆದರೆ ಕೊನೇಕ್ಷಣದಲ್ಲಿ ತಾಂತ್ರಿಕ ದೋಷಗಳು ಕಂಡುಬಂದ ಕಾರಣ, ನಿಗದಿತ ಸಮಯಕ್ಕೆ ರಾಕೆಟ್ ಲಾಂಚ್ ಸ್ಥಗಿತಗೊಂಡು ಮುಂದೂಡಲ್ಪಟ್ಟಿತು.
ಹೈದರಾಬಾದ್ನ ಖಾಸಗಿ ಸ್ಪೇಸ್ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಇಂದು ತನ್ನ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ವಿಕ್ರಮ್-1 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಬೇಕಿತ್ತು. ಆ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಬೇಕಿತ್ತು. ಸದ್ಯ ವಿಜ್ಞಾನಿಗಳು ತಾಂತ್ರಿಕ ದೋಷವನ್ನು ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ಪುನಃ ಈ 12.05 ಗಂಟೆಗೆ ಸರಿಯಾಗಿ ಉಪಗ್ರಹ ಉಡಾವಣೆ ಆಯಿತು.
ಭಾರತದ ಖಾಸಗಿ ಕಂಪನಿಯೊಂದು ಪೂರ್ಣವಾಗಿ ಅಭಿವೃದ್ಧಿಪಡಿಸಿದ ವಿಕ್ರಮ್-1 ಭಾರತದ ಮೊದಲ ಖಾಸಗಿ ಆರ್ಬಿಟಲ್ ಲಾಂಚ್ ವೆಹಿಕಲ್ ಆಗಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಸಾಮರ್ಥ್ಯವನ್ನು ಬಲಪಡಿಸಲಿದೆ. ವಿಕ್ರಮ್-1 ನ ಈ ಪರೀಕ್ಷಾ ಉಡಾವಣೆಯು ಭಾರತವನ್ನು ವಿಶ್ವದ ಖಾಸಗಿ ಆರ್ಬಿಟಲ್ ಲಾಂಚ್ ಮಾರುಕಟ್ಟೆಗೆ ಪ್ರವೇಶಿಸುವಂತೆ ಮಾಡುವ ಪ್ರಮುಖ ಹೆಜ್ಜೆಯಾಗಲಿದೆ.
