Radhika Pandit: ಚಂದನವನದ ರಾಕಿಭಾಯ್, ನಟ ಯಶ್ ಅಭಿನಯದ ‘ರಾಮಾಯಣ’ ಚಿತ್ರದ ಟ್ರೇಲರ್ ಅದ್ಧೂರಿ ಬಿಡುಗಡೆಯಾಗಿದ್ದು, ಪ್ಯಾನ್ ಇಂಡಿಯಾದಲ್ಲಿ ಯಶ್ ಅಭಿನಯ ಧೂಳೆಬ್ಬಿಸುತ್ತಿದೆ. ಇದರ ಬೆನ್ನಲ್ಲೇ ಯಶ್ ಪತ್ನಿ ರಾಧಿಕಾ ಪಂಡಿತ್ ರಾವಣನ ಪ್ರತಿಮೆ ಮುಂದೆ ನಿಂತು ಕ್ಯಾಮೆರಾಗೆ ಕೊಟ್ಟಿರುವ ಪೋಸ್ ಫೋಟೋ ವೈರಲ್ ಆಗಿದೆ. ರಾವಣನ ಮೂರ್ತಿ ಮುಂದೆ ನಿಂತು ರಾಧಿಕಾ ನೀಡಿರುವ ಸ್ಟೈಲಿಶ್ ಪೋಸ್ ಅಭಿಮಾನಿಗಳ ಮನಗೆದ್ದಿದೆ.RADHIKA

RAAMAYANADA RAAVANA YASH: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಜುಲೈ 30ರಂದು ಬಿಡುಗಡೆಯಾಗಿ ವಿಶ್ವಾದ್ಯಂತ ಧೂಳೆಬ್ಬಿಸುತ್ತಿದೆ. ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಯಶ್ ಕಾಣಿಸಿಕೊಂಡಿರುವ ಅಬ್ಬರದ ಝಲಕ್ ಅಭಿಮಾನಿಗಳಲ್ಲಿ ಭಾರಿ ರೋಮಾಂಚನ ಸೃಷ್ಟಿಸಿದೆ. ಈ ಸಂಭ್ರಮದ ನಡುವೆಯೇ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ಸಖತ್ ವೈರಲ್ ಆಗುತ್ತಿದೆ.
ಹೌದು, ರಾಧಿಕಾ ಪಂಡಿತ್ ಅವರು ಹಂಚಿಕೊಂಡಿರುವ ಇತ್ತೀಚೆಗೆ ಫೋಟೋವೊಂದರಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಮುದ್ರ ತೀರದಲ್ಲಿನ ರಾವಣನ ಪ್ರತಿಮೆ ಮುಂದೆ ನಿಂತು ಪೋಸ್ ಕೊಟ್ಟಿರುವ ಫೋಟೋ ಭಾರಿ ಸದ್ದು ಮಾಡುತ್ತಿದೆ. ಪತಿಯ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ರಾವಣನ ಮೂರ್ತಿಯೊಂದಿಗಿನ ಫೋಟೋವನ್ನು ಅವರು ಪೋಸ್ಟ್ ಮಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಮಂಡೋದರಿ ಎಂದು ಕಾಮೆಂಟ್
‘ರಾಮಾಯಣ’ ಟ್ರೇಲರ್ನಲ್ಲಿ ಯಶ್ ಅವರ ರಾವಣನ ಲುಕ್ ನೋಡಿ ಫಿದಾ ಆಗಿರುವ ಸಿನಿರಸಿಕರು, ರಾಧಿಕಾ ಪಂಡಿತ್ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಮ್ಮ ರಾವಣನ ನಿಜವಾದ ಮಂಡೋದರಿ ಇವರೇ’ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
