Tamilnadu Government-Announces-10-Lakh-Compensation: ಕರ್ನಾಟಕದ ಅರಣ್ಯದಲ್ಲಿ ಮೃತಪಟ್ಟ ತಮಿಳು ಮೂಲದ ಮೂವರ ಕುಟುಂಬಗಳಿಗೆ ತಮಿಳುನಾಡು ಅರಣ್ಯ ಇಲಾಖೆ ತಲಾ 10 ಲಕ್ಷ ರೂ. ಪರಿಹಾರ ನೀಡಲಿದೆ ಎಂದು ಅರಣ್ಯ ಸಚಿವ ಆರ್ವಿ ರಂಜಿತ್ಕುಮಾರ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಚೆನ್ನೈ, ಆ.18: ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಬಲಿಯಾದ ಮೂವರು ಶಂಕಿತ ಬೇಟೆಗಾರರ ಕುಟುಂಬಕ್ಕೆ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಕರ್ನಾಟಕದ ಅರಣ್ಯದಲ್ಲಿ ಮೃತಪಟ್ಟ ತಮಿಳು ಮೂಲದ ಮೂವರ ಕುಟುಂಬಗಳಿಗೆ ತಮಿಳುನಾಡು ಅರಣ್ಯ ಇಲಾಖೆ ತಲಾ 10 ಲಕ್ಷ ರೂ. ಪರಿಹಾರ ನೀಡಲಿದೆ ಎಂದು ಅರಣ್ಯ ಸಚಿವ ಆರ್ವಿ ರಂಜಿತ್ಕುಮಾರ್ ಅವರು ಇಂದು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು. ಈ ವೇಳೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದು, ಕರ್ನಾಟಕ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
