HDK SLAMS PRIYANK KHARGE: ಕೆಪಿಎಸ್ಸಿ ನೇಮಕಾತಿ ಅಕ್ರಮ ಕೇಸ್ನ ಆರೋಪಿ ಜ್ಞಾನೇಂದ್ರ ಕುಮಾರ್ನನ್ನು ಇ.ಡಿ ತನಿಖೆಯಿಂದ ರಕ್ಷಿಸಲು ದೇವನಹಳ್ಳಿಯ ರೆಸಾರ್ಟ್ನಲ್ಲಿಟ್ಟು ರಾಜಾತಿಥ್ಯ ನೀಡಲಾಗಿತ್ತು ಹಾಗೂ ಆತ ಸಿಐಡಿಗೆ ಶರಣಾಗಿದ್ದರೂ ಉತ್ತರ ಪ್ರದೇಶದಿಂದ ಬಂಧಿಸಿ ಕರೆತರಲಾಗಿದೆ ಎಂದು ಸುಳ್ಳು ಕಥೆ ಕಟ್ಟಲಾಗುತ್ತಿದೆ.
ದೆಹಲಿ, ಆ.31: ದೆಹಲಿಯ ಕುಶ
ಕ್ ರಸ್ತೆಯಲ್ಲಿರುವ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಕೆಪಿಎಸ್ಸಿ ನೇಮಕಾತಿ ಅಕ್ರಮ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.
ಸತ್ಯವನ್ನು ಹೊರಗೆಡಹುವಂತೆ ಮತ್ತು ಪ್ರಕರಣದ ಕುರಿತು ಅಕೌಂಟೆಬಿಲಿಟಿ ನೀಡುವಂತೆ ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ‘ಕೆಪಿಎಸ್ಸಿ ಅಕ್ರಮ ಜಗಜ್ಜಾಹೀರಾಗಿದ್ದರೂ ಸರ್ಕಾರ ಸೂಕ್ತ ತನಿಖೆ ನಡೆಸದೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ.
ಪ್ರಕರಣದ ಪ್ರಮುಖ ಆರೋಪಿ ಜ್ಞಾನೇಂದ್ರ ಕುಮಾರ್ನನ್ನು ಇ.ಡಿ ತನಿಖೆಯಿಂದ ರಕ್ಷಿಸಲು ದೇವನಹಳ್ಳಿಯ ರೆಸಾರ್ಟ್ನಲ್ಲಿಟ್ಟು ರಾಜಾತಿಥ್ಯ ನೀಡಲಾಗಿತ್ತು ಹಾಗೂ ಆತ ಸಿಐಡಿಗೆ ಶರಣಾಗಿದ್ದರೂ ಉತ್ತರ ಪ್ರದೇಶದಿಂದ ಬಂಧಿಸಿ ಕರೆತರಲಾಗಿದೆ ಎಂದು ಸುಳ್ಳು ಕಥೆ ಕಟ್ಟಲಾಗುತ್ತಿದೆ. ಹೈಕೋರ್ಟ್ ಸಹ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಪ್ರಸ್ತಾಪಿಸಿರುವಾಗ, ಸರ್ಕಾರ ಇನ್ನೂ ಸತ್ಯ ಮುಚ್ಚಿಡುತ್ತಿದ್ದು, ಸಚಿವರ ನೇರ ಪಾತ್ರದ ಬಗ್ಗೆ ತನಿಖೆಯಾಗಲಿ’ ಎಂದು ದಾಖಲೆಗಳ ಸಮೇತ ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
