BOLDWIN School students spreading awareness of Drug: ಯುವ ಜನತೆಯಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಾಣಸವಾಡಿ ನ್ಯೂ ಬಾಲ್ಡ್ವಿನ್ ಶಾಲೆಯ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ವಾಕಥಾನ್ ನಡೆಸಿ ನಶೆ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಬೆಂಗಳೂರು, ಅ.05: ಯುವ ಜನತೆಯಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಾಣಸವಾಡಿ ನ್ಯೂ ಬಾಲ್ಡ್ವಿನ್ ಶಾಲೆಯ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ವಾಕಥಾನ್ ನಡೆಸಿ ನಶೆ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ರಾಮಮೂರ್ತಿ ನಗರ ಬಾಣಸವಾಡಿ ಮುಖ್ಯ ರಸ್ತೆಯಲ್ಲಿರುವ ಶಾಲಾ ಆವರಣದಿಂದ ಬಾಣಸವಾಡಿಯ ವಿವಿಧ ಭಾಗಗಳಲ್ಲಿ ನಡಿಗೆ ನಡೆಸಿ ನಶೆ ಮುಕ್ತ ಪರಿಸರ ನಿರ್ಮಾಣದ ಸಂದೇಶ ಸಾರಿದರು.
ವಾಕಥಾನ್ನಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಮುನೇಗೌಡ ಮಾತನಾಡಿ,
ನಶಮುಕ್ತ ಭಾರತಕ್ಕಾಗಿ ನಾವೆಲ್ಲ ಕೈ ಜೋಡಿಸಬೇಕು. ಪೊಲೀಸ್, ವಿದ್ಯಾರ್ಥಿಗಳು ಎಲ್ಲರೂ ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನ್ಯೂ ಬಾಲ್ಡ್ವಿನ್ ಇಂಟರ್ ನ್ಯಾಷನಲ್ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಪ್ರಯತ್ನ ಶ್ಲಾಘನೀಯ ಎಂದರು.
ಈ ವೇಳೆ ಮಿನಿಸ್ಟರಿ ಆಫ್ ಯೂಥ್ಸ್ನ ನಿರ್ದೇಶಕ ಅಶೋಕ್ ಕುಮಾರ್ ದಾಸ್, ಎನ್ಎಸ್ಎಸ್ ಅಡ್ವೈಸರ್ ಡಾ.ಪ್ರಶಾಂತ್, ನ್ಯೂ ಬಾಲ್ಡ್ವಿನ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಸ್ವರನ್ಯ ದೇವಿ ವೆಂಕಟರಾಮನ್ ಉಪಸ್ಥಿತರಿದ್ದರು.
