IPS Officer resign: ಕೆಎಸ್ಆರ್ಪಿಯಲ್ಲಿ ಎಡಿಜಿಪಿ ಆಗಿರೋ ಎಸ್.ರವಿ ಅವರು ದಿಢೀರ್ ರಾಜೀನಾಮೆ ಸಲ್ಲಿಕೆ ಮಾಡಿದ್ದು, ರಾಜೀನಾಮೆಗೆ ಕಾರಣ ಏನು ಎಂಬ ಕುತೂಹಲ ಮೂಡಿಸಿದೆ.

ಬೆಂಗಳೂರು, ಅ.13: ರಾಜ್ಯದ ಆಡಳಿತ ವರ್ಗದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು, ಇದೀಗ ಐಪಿಎಸ್ ಅಧಿಕಾರಿ ಎಸ್ ರವಿ ಅವರು ದಿಢೀರ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಸದ್ಯ ಕೆಎಸ್ಆರ್ಪಿಯಲ್ಲಿ ಎಡಿಜಿಪಿ ಆಗಿರೋ ಎಸ್ ರವಿ ಅವರು ದಿಢೀರ್ ರಾಜೀನಾಮೆ ಸಲ್ಲಿಕೆ ಮಾಡಿದ್ದು, ರಾಜೀನಾಮೆಗೆ ಕಾರಣ ಏನು ಅನ್ನೋದೇ ಕುತೂಹಲ ಮೂಡಿಸಿದೆ.
ಐಪಿಎಸ್ ಅಧಿಕಾರಿ ಎಸ್.ರವಿ ಅವರು ಡಿಜಿ ಕಚೇರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. 1998ರ ಬ್ಯಾಚ್ನ ಐಪಿಎಸ್ ಅಧಿಕಾರಿ ರವಿ , ಈ ಹಿಂದೆ ಗುಪ್ತಚರ ಇಲಾಖೆಯ ಎಡಿಜಿಪಿ ಆಗಿದ್ದರು. ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಬಳಿಕ ಇವರನ್ನ KSRP ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿತ್ತು.
ರವಿ ಅವರಿಗೆ ನಿವೃತ್ತಿಗೆ 6 ತಿಂಗಳು ಬಾಕಿ ಇತ್ತು. ಇದೀಗ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಡಿಜಿ ಐಜಿಪಿ ಸಲೀಂ ಅವರು ಮಾಹಿತಿಯನ್ನು ದೃಢೀಕರಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಹಿರಿಯ ಅಧಿಕಾರ ಜೊತೆ ಮನಸ್ತಾಪದ ಕಾರಣ ರಾಜೀನಾಮೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
