IAS Officer: IAS officer gets into a fight with an inspector over oil spill in a pub in Bengaluru..? – IAS Officer: ಬೆಂಗಳೂರಿನ ಪಬ್ನಲ್ಲಿ IAS ಅಧಿಕಾರಿ ಕಿರಿಕ್! ಎಣ್ಣೆ ಮತ್ತಲ್ಲಿ ಇನ್ಸ್ಪೆಕ್ಟರ್ ಜೊತೆ ಗಲಾಟೆ..?
ವಿಕಾಸ್ ಮರ್ಮತ್, ತಮ್ಮ ಗೆಳೆಯರಾದ ನಿತೇಶ್, ಅಭಯ್ ಉದಯ್ ಸಿಂಗ್ ಮತ್ತು ರೋಷನ್ ಅವರೊಂದಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿರುವ ಕ್ಯಾವೋರ್ ಪಬ್ಗೆ ಬಂದಿದ್ದರು. ಈ ವೇಳೆ ಪೊಲೀಸರು ಪಬ್ ಪರಿಶೀಲನೆಗೆ ಬಂದಾಗ ಕಿರಿಕ್ ಆಗಿದೆ.

ಬೆಂಗಳೂರು ಅ.13 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಮಧ್ಯರಾತ್ರಿ ಪಬ್ನಲ್ಲಿ ಕುಡಿದು ಕಿರಿಕ್ ಮಾಡಿರೋ ಘಟನೆ ನಡೆದಿದೆ. ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ಬೆಂಗಳೂರಿನ ಪೊಲೀಸ್ ಅಧಿಕಾರಿಯ ಮೇಲೆ ದರ್ಪ ತೋರಿದ ಆರೋಪ ಕೇಳಿ ಬಂದಿದೆ. ಆಂಧ್ರಪ್ರದೇಶದ ಕೇಡರ್ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮತ್ ಹಾಗೂ ಸ್ನೇಹಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಎಣ್ಣೆ ಮತ್ತಿನಲ್ಲಿ ಐಎಎಸ್ ಅಧಿಕಾರಿ ಅನ್ನೋದನ್ನೇ ಮರೆತ್ರಾ ವಿಕಾಶ್ ಮರ್ಮತ್?
ಎಣ್ಣೆ ಮತ್ತಲ್ಲಿ IAS ಅಧಿಕಾರಿ ಕಿರಿಕ್..!?
ಆಂಧ್ರದ IAS ಅಧಿಕಾರಿ ಬೆಂಗಳೂರಿನ ಪಬ್ಗೆ ಬಂದು ಕಿರಿಕ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ ಸೇವೆಯಲ್ಲಿರುವ ವಿಕಾಸ್ ಮರ್ಮತ್, ತಮ್ಮ ಗೆಳೆಯರಾದ ನಿತೇಶ್, ಅಭಯ್ ಉದಯ್ ಸಿಂಗ್ ಮತ್ತು ರೋಷನ್ ಅವರೊಂದಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿರುವ ಕ್ಯಾವೋರ್ ಪಬ್ಗೆ ಬಂದಿದ್ದರು. ಈ ವೇಳೆ ಪೊಲೀಸರು ಪಬ್ ಪರಿಶೀಲನೆಗೆ ಬಂದಾಗ ಕಿರಿಕ್ ಆಗಿದೆ.
IAS ಅಧಿಕಾರಿ ವಿಕಾಸ್ ಮರ್ಮತ್ ದರ್ಪ..?
ಕಮಿಷನರ್ ಸೂಚನೆ ಮೇರೆಗೆ ಬೆಂಗಳೂರಿನಾದ್ಯಂತ ಪಬ್ ಗಳ ಪರಿಶೀಲನೆ ನಡೆದಿದ್ದು, ಕಳೆದ ಅಕ್ಟೋಬರ್ 09 ರಂದು ಪೊಲೀಸರು ಕ್ಯಾವೋರ್ ಪಬ್ ಪರಿಶೀಲನೆ ನಡೆಸ್ತಿದ್ದರು. ಇದೇ ವೇಳೆ ವಿಕಾಸ್ ಮರ್ಮತ್ ಬಳಿ ಐಡಿ ಕಾರ್ಡ್ ಕೇಳಿದ್ದಾರೆ. ಇದ್ರಿಂದ ಕೋಪಗೊಂಡ ಆಂಧ್ರ ಐಎಎಸ್ ಅಧಿಕಾರಿ ಪೊಲೀಸರ ಮೇಲೆ ಕೂಗಾಡಿದ್ದಾರೆ.
ಅವಾಚ್ಯ ಪದ ಬಳಸಿ ನಿಂದನೆ..?
ಎಣ್ಣೆ ಮತ್ತಿನಲ್ಲಿದ್ದ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್, ಪೊಲೀಸ್ ಅಧಿಕಾರಿಗಳನ್ನ ಅವಾಚ್ಯ ಪದ ಬಳಸಿ ಬೈಯ್ದಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಪೊಲೀಸ್ ಇನ್ಸ್ಪೆಕ್ಟರ್ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ನಾನು ಐಎಎಸ್ ಅಧಿಕಾರಿ, ನಿಮ್ಮಿಂದ ಏನು ಮಾಡಲು ಆಗಲ್ಲ ಎಂದು ಬೆದರಿಕೆ ಎಂಬ ಆರೋಪಿವಿದೆ.
