25 Congress MLAs will join BJP at any moment, even if elections are held: B.Y. Vijayendra's explosive statement..? - ಯಾವುದೇ ಕ್ಷಣದಲ್ಲಿ ಎಲೆಕ್ಷನ್ ನಡೆದರೂ ಕಾಂಗ್ರೆಸ್ನ 25 ಶಾಸಕರು ಬಿಜೆಪಿಗೆ ಬರ್ತಾರೆ: ಬಿ.ವೈ. ವಿಜಯೇಂದ್ರ ಸ್ಪೋಟಕ ಹೇಳಿಕೆ
..?
ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ನ 25 ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಸ್ಟಿಂಗ್ ಆಪರೇಷನ್ ಕುರಿತಂತೆ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದು, ಈ ಷಡ್ಯಂತ್ರವನ್ನು ರಾಜಕಾರಣದ ವ್ಯಭಿಚಾರವಿದ್ದಂತೆ ಎಂದಿದ್ದು,ರೈತರಿಗೆ ಘೋಷಿಸಿದ 2,500ರೂ. ಪರಿಹಾರ ವಿತರಣೆಯಲ್ಲಿ ವಿಫಲತೆ ಸೇರಿದಂತೆ ತೈಲ ಕಂಪನಿಗಳಿಗೆ ಬಾಕಿ ಪಾವತಿಸದೆ ಸಾರಿಗೆ ಬಸ್ ನಿಲ್ಲಿಸುವ ಸ್ಥಿತಿಗೆ ಬಂದಿದೆ. ಹೀಗೆ ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗಿರುವುದರ ಕುರಿತು ಗಮನ ಬೇರೆಡೆ ಸೆಳೆಯಲು ಸ್ಟಿಂಗ್ ವಿಚಾರ ಮುನ್ನಲೆಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೈಲೈಟ್ಸ್:
- ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ನಿಂದ 25 ಜನ ಬಿಜೆಪಿಗೆ ಪಕ್ಷಾಂತರ ಮಾಡ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೇಂದ್ರ ಹೇಳಿಕೆ.
- ಸ್ಟಿಂಗ್ ಆಪರೇಷನ್ ಮೂಲಕ ರಾಜ್ಯದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಬಿವೈವಿ ಕಿಡಿ.
- SIR ಪ್ರಕ್ರಿಯೆಗೆ ಆಕ್ಷೇಪಿಸಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಭೇಟಿಯಾದ ಇಂಡಿಯಾ ಮೈತ್ರಿಕೂಟದ ನಡೆಗೆ ಕಿಡಿ.
![]()
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದ ಸದಸ್ಯರೂ ಸೇರಿದಂತೆ 25 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿದ್ದು, ಅಂತಹ ರಾಜಕೀಯ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಅ.12ರಂದು ಮಾತನಾಡಿದ ಅವರು, ”ಕಳೆದ ಲೋಕಸಭಾ ಚುನಾವಣೆಯಲ್ಲಿ ಜನ ಸ್ವಲ್ಪ ಎಡವಿ ಯುಪಿಎ ಮೈತ್ರಿಕೂಟಕ್ಕೆ ಒಂದಷ್ಟು ಸ್ಥಾನ ನೀಡಿದ್ದರು. ಮುಂದಿನ ಬಾರಿ ಆ ರೀತಿ ಆಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರಿಂದಲೇ ಆ ಪಕ್ಷಕ್ಕೆ ಮುಂದಿನ ಬಾರಿ ಸೀಟುಗಳ ಸಂಖ್ಯೆ ಕಡಿಮೆಯಾಗಲಿದೆ,” ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ವಿರುದ್ದ ಬಿವೈವಿ ಕಿಡಿ..?
ಅಲ್ಲದೆ, ”ಸದ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಕರ್ನಾಟಕದ ರಾಜಕಾರಣ ಇಷ್ಟೊಂದು ಕೀಳು ಮಟ್ಟಕ್ಕೆ ಎಂದೂ ಹೋಗಿರಲಿಲ್ಲ ಎನಿಸುತ್ತದೆ. ದೇಶದಲ್ಲಿ ರಾಜಕಾರಣಿಗಳೆಂದರೆ ಜನ ಅಸಹ್ಯಪಡುವಂತಾಗಿರುವ ಹೊತ್ತಿನಲ್ಲೇ ಸ್ಟಿಂಗ್ ಆಪರೇಷನ್ ಮುಂತಾದ ಷಡ್ಯಂತ್ರಗಳು ನಡೆದರೆ ಖಂಡಿತಾ ಒಳ್ಳೆಯದಲ್ಲ. ಕಾಂಗ್ರೆಸ್ನಲ್ಲಿ ಕೆಲವರು ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಸಚಿವರಾಗಲು, ಮುಖ್ಯಮಂತ್ರಿಯಾಗಲು ಸ್ಟಿಂಗ್ ನಡೆದಿದೆ ಎಂಬ ಮಾತುಗಳಿದ್ದು, ಮುಂದೆ ಎಲ್ಲವೂ ಬಹಿರಂಗವಾಗಲಿದೆ. ಇದು ರಾಜಕಾರಣದ ವ್ಯಭಿಚಾರ. ಇಂತಹ ಕೃತ್ಯ ಎಸಗಿದವರು ಮುಂದೆ ಅದರ ಪರಿಣಾಮ ಅನುಭವಿಸಲಿದ್ದಾರೆ,” ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕಾಂಗ್ರೆಸ್ ಸರ್ಕಾರ ಭಿಕ್ಷೆ ನೀಡುವಂತೆ ರೈತರಿಗೆ 2,500 ರೂ. ಪರಿಹಾರ ಘೋಷಿಸಿದ್ದು, ಅದನ್ನೂ ಸಮರ್ಪಕವಾಗಿ ವಿತರಿಸುತ್ತಿಲ್ಲ. ರೈತರಿಗೆ ನೆರವಾಗಲು ಸಾಧ್ಯವಾಗದ ಕಾರಣ ಸರ್ಕಾರ ಸ್ಟಿಂಗ್ ಆಪರೇಷನ್ ವಿಷಯವನ್ನು ಮುನ್ನೆಲೆಗೆ ತಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ರಾಜ್ಯ ಆರ್ಥಿಕ ದಿವಾಳಿಯತ್ತ ತಲುಪಿದೆ. ಕೇಂದ್ರದ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳುವುದೇ ಇವರ ಕೆಲಸವಾಗಿದೆ,” ಎಂದು ವಾಗ್ದಾಳಿ ನಡೆಸಿದರು.
”ಸರ್ಕಾರ ತೈಲ ಕಂಪನಿಗಳಿಗೆ ಬಾಕಿ ಪಾವತಿಸದ ಕಾರಣ ಸಾರಿಗೆ ಬಸ್ಗಳು ಡಿಪೋದಲ್ಲೇ ನಿಲ್ಲುವಂತಾಗಿವೆ. ಈ ರಿಯಲ್ ಎಸ್ಟೇಟ್ ಸರ್ಕಾರ ಹಣ ಇಲ್ಲದಿದ್ದರೂ ತಾಲೂಕುಗಳಲ್ಲಿ ರಿಂಗ್ ರಸ್ತೆ ಬಿ.ವೈ. ಮಾಡಲು ಮುಂದಾಗಿದೆ. ಅಲ್ಲೂ ರಿಯಲ್ ಎಸ್ಟೇಟ್ ದಂಧೆಗೆ ಸಜ್ಜಾಗಿದೆ,” ಎಂದು ದೂರಿದರು.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಭೇಟಿಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮನವಿ ಮಾಡಿದೆ. ಎಸ್ಐಆರ್ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದಿರುವಾಗ ಮುಖ್ಯ ನ್ಯಾಯಮೂರ್ತಿಗಳ ಭೇಟಿಗೆ ವಿನಂತಿಸುವುದು ಕಾಂಗ್ರೆಸ್ಗೆ ಶೋಭೆ ತರುವುದಿಲ್ಲ. ಹೇಗಾದರೂ ಮಾಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದ್ದು, ಜನ ಇದನ್ನೆಲ್ಲಾ ಒಪ್ಪುವುದಿಲ್ಲ ಎಂದು ಹೇಳಿದರು. ಅಲ್ಲದೆ, “ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ವವಾದರೂ ಮಾನ ಮರ್ಯಾದೆ ಇದ್ದರೆ, ತಾಕತ್ತು ಇದ್ದರೆ ದೇಶದ ಮತದಾರರ ವಿಶ್ವಾಸ ಗೆಲ್ಲುವ ಕೆಲಸ ಮಾಡಲಿ. ಜನರ ವಿಶ್ವಾಸ ಗಳಿಸಿ ದೇಶ, ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ,” ಎಂದು ಸವಾಲು ಹಾಕಿದರು.
