Police face headache with ‘Kartavya App’! Attendance system faces problems from the start..? – ಪೊಲೀಸರಿಗೆ ‘ಕರ್ತವ್ಯ ಆ್ಯಪ್’ ತಲೆನೋವು! ಹಾಜರಾತಿ ವ್ಯವಸ್ಥೆಗೆ ಆರಂಭದಲ್ಲೇ ಅಪಸ್ವರ..?
ಬೆಳಗ್ಗೆ ಕಮಿಷನರ್ ಕಚೇರಿಗೆ ಹೋಗಿ ಕರ್ತವ್ಯ ಆ್ಯಪ್ನಲ್ಲಿಹಾಜರಾತಿ ಹಾಕಬೇಕು. ನಂತರ ವಿವಿಐಪಿ ಹಾಗೂ ಅಧಿಕಾರಿಗಳು ಸುರಕ್ಷತೆಗೆ ತೆರಳಬೇಕು. ಹಲವು ಬಾರಿ ತಡ ರಾತ್ರಿವರೆಗೆ ಕೆಲಸ ಮಾಡುತ್ತೇವೆ. ಇಷ್ಟೆಲ್ಲಆದ ಮೇಲೆ ಮರಳಿ ಕಮಿಷನರ್ ಕಚೇರಿಗೆ ಬಂದು ಹಾಜರಾತಿ ಹಾಕಬೇಕು. ನಿಗದಿತ ಸಮಯ ಇಲ್ಲದಂತೆ ನೌಕರಿ ಮಾಡಿದ ಮೇಲೂ ತಂತ್ರಜ್ಞಾನದ ಹೆಸರಲ್ಲಿಇನ್ನೆಷ್ಟು ಕಷ್ಟ ಕೊಡುತ್ತಾರೆ. ಕೂಡಲೇ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಆ್ಯಪ್ನಿಂದ ಹೊರಗಿಡಬೇಕು ಎಂಬ ಬೇಡಿಕೆ ಇದೆ.
ಹೈಲೈಟ್ಸ್:
- ನಿಗದಿತ ಸ್ಥಳದ ಲಾಗ್ಇನ್, ಲಾಗ್ ಔಟ್ ತೆಗೆಯಬೇಕು.
- ಕೆಲಸ ಮಾಡುವ ಯಾವುದೇ ಸ್ಥಳದಿಂದ ಹಾಜರಾತಿಗೆ ಅವಕಾಶ ನೀಡಬೇಕು
- ನಿಗದಿತ ಹಾಗೂ ಹೆಚ್ಚುವರಿ ಕೆಲಸದ ಬಗ್ಗೆ ಸ್ಪಷ್ಟತೆ ನೀಡಬೇಕು
![]()
ಪಿಎಸ್ಐಗಳ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ..
ಕಲಬುರಗಿ: ಪೊಲೀಸ್ ಇಲಾಖೆಯಲ್ಲಿಹಾಜರಾತಿ ನಿರ್ವಹಣೆಗಾಗಿ ಪರಿಚಯಿಸಲಾಗಿರುವ ‘ಕರ್ತವ್ಯ ಆ್ಯಪ್’ ಆರಂಭದಿಂದಲೇ ಸಿಬ್ಬಂದಿ ವಲಯದಲ್ಲಿಅಸಮಾಧಾನಕ್ಕೆ ಕಾರಣವಾಗಿದೆ. ಸಮಯಪಾಲನೆ ಮತ್ತು ಹಾಜರಾತಿ ದಾಖಲಿಸುವ ಉದ್ದೇಶ ಹೊಂದಿರುವ ಈ ವ್ಯವಸ್ಥೆ, ಪೊಲೀಸರ ಅನಿಶ್ಚಿತ ಕರ್ತವ್ಯದ ಸ್ವರೂಪಕ್ಕೆ ಎಷ್ಟರಮಟ್ಟಿಗೆ ಹೊಂದಿಕೆಯಾಗುತ್ತದೆ ಎಂಬ ಚರ್ಚೆ ಶುರುವಾಗಿದೆ.
ಬೇರೆ ಇಲಾಖೆಗಳ ಸರಕಾರಿ ಕಚೇರಿಗಳಲ್ಲಿನಿಗದಿತ ಸಮಯಕ್ಕೆ ಕೆಲಸ ಮುಗಿಯಬಹುದು..?
ಆದರೆ, ಪೊಲೀಸರ ಕರ್ತವ್ಯ ಹಾಗಲ್ಲ. ಅಪಘಾತ, ಅಪರಾಧ, ಗಲಭೆ, ಬಂದೋಬಸ್್ತ ಸೇರಿ ತುರ್ತು ಸಂದರ್ಭಗಳು ಯಾವಾಗ ಬೇಕಾದರೂ ಎದುರಾಗಬಹುದು. ಹೀಗಾಗಿ ನಿಗದಿತ ಶಿಫ್ಟ್ ಮುಗಿದ ಬಳಿಕವೂ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಕರೆಯುವ ಮತ್ತು ಹೋಗುವ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿಹಾಜರಾತಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದು ಪೊಲೀಸ್ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಏನಿದು ಕರ್ತವ್ಯ ಆ್ಯಪ್..?
ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಅಡಿಯಲ್ಲಿಕರ್ತವ್ಯ ಆ್ಯಪ್ ಕಾರ್ಯನಿರ್ವಹಿಸುತ್ತದೆ. ಸರಕಾರಿ ನೌಕರರು ಮೊಬೈಲ್ ಮೂಲಕ ಹಾಜರಾತಿ ದಾಖಲಿಸಲು ನೆರವಾಗುತ್ತದೆ. ಆ್ಯಪ್ನಲ್ಲಿನ ಚೆಕ್ಇನ್, ಚೆಕ್ಔಟ್ ಮತ್ತು ಸ್ಥಳದ ಮಾಹಿತಿ ಆಧಾರಿತ ದಾಖಲಾಗುತ್ತವೆ.
ಹೆಚ್ಚುವರಿ ಕೆಲಸಕ್ಕೆ ಕುತ್ತು..?
ಯಾವುದೇ ಪೊಲೀಸ್ ಸಿಬ್ಬಂದಿ ನಿಗದಿಯಂತೆ ಕೇವಲ 8 ಗಂಟೆ ಕೆಲಸ ಮಾಡುವುದಿಲ್ಲಎಂಬುದು ಇಲಾಖೆಯ ಮೇಲಧಿಕಾರಿಗಳಿಗೂ ಕೂಡ ತಿಳಿದಿದೆ. ಇನ್ನು ದಿನಕ್ಕೆ 12ರಿಂದ 14 ಗಂಟೆಗಳವರೆಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದೀಗ ಆ್ಯಪ್ ಮಾಡಿದರೆ, ನಮ್ಮ ನಿಗದಿತ ಕೆಲಸದ ಅವಧಿ ಮತ್ತು ಹೆಚ್ಚುವರಿ ಕರ್ತವ್ಯದ ಲೆಕ್ಕಾಚಾರದಲ್ಲಿಸ್ಪಷ್ಟತೆ ನೀಡಿ ಎಂಬುದು ಪೊಲೀಸ್ ಸಿಬ್ಬಂದಿ ಮಾತಾಗಿದೆ. ಗಸ್ತು, ಬಂದೋಬಸ್ತ್ ಹಾಗೂ ಕ್ಷೇತ್ರಮಟ್ಟದ ಕಾರ್ಯಾಚರಣೆ ವೇಳೆ ಚೆಕ್ಇನ್, ಚೆಕ್ಔಟ್ ಮಾಡಲು ತೊಂದರೆಯಾಗುವ ಆತಂಕವೂ ಇದೆ ಎಂದು ಪೊಲೀಸ್ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪರಿಹಾರಕ್ಕೆ ಸಮಗ್ರ ಪರಿಶೀಲನೆ ಅಗತ್ಯ
ಹಾಜರಾತಿ ವ್ಯವಸ್ಥೆಯಿಂದ ಕೆಲಸದ ಅವಧಿಯಲ್ಲಿಪಾರದರ್ಶಕತೆ ಮೂಡಬಹುದು. ಆದರೆ, ಪೊಲೀಸ್ ಕರ್ತವ್ಯದ ವಾಸ್ತವಕ್ಕೆ ಅನುಗುಣವಾಗಿ ನಿಯಮಗಳನ್ನು ರೂಪಿಸಬೇಕಿದೆ. ನೆಟ್ವರ್ಕ್ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ, ಹೆಚ್ಚುವರಿ ಕರ್ತವ್ಯದ ದಾಖಲಾತಿ, ತುರ್ತು ನಿಯೋಜನೆಗೆ ಸ್ಪಷ್ಟ ಮಾರ್ಗಸೂಚಿ ಹಾಗೂ ಸಿಬ್ಬಂದಿಗೆ ಸಮರ್ಪಕ ವಿಶ್ರಾಂತಿ ಕಲ್ಪಿಸುವ ಕ್ರಮಗಳು, ಲಾಗ್ಇನ್ ಹಾಗೂ ಲಾಗ್ಔಟ್ ಬಗ್ಗೆ ಹೆಚ್ಚಿನ ಸ್ಪಷ್ಟತೆ ಅಗತ್ಯವಾಗಿವೆ. ಪೊಲೀಸರ ಕರ್ತವ್ಯವನ್ನು ಕೇವಲ ಸಮಯದ ಚೌಕಟ್ಟಿನಲ್ಲಿಅಳೆಯುವ ಬದಲು, ಸಿಬ್ಬಂದಿಯ ಹಿತಾಸಕ್ತಿ ಮತ್ತು ಸಾರ್ವಜನಿಕರ ಸುರಕ್ಷತೆ ಎರಡಕ್ಕೂ ಧಕ್ಕೆಯಾಗದಂತೆ ಕರ್ತವ್ಯ ಆ್ಯಪ್ನ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸೂಕ್ತ ಬದಲಾವಣೆಗಳನ್ನು ಮಾಡಬೇಕು ಎಂಬುದು ಸಿಬ್ಬಂದಿ ಆಗ್ರಹವಾಗಿದೆ.
ಕರ್ತವ್ಯದ ಸ್ಥಳ ಬದಲಾದರೆ ಹೇಗೆ?
ಪೊಲೀಸ್ ಸಿಬ್ಬಂದಿ ಸೇರಿ ಅಧಿಕಾರಿಗಳಿಗೆ ನಿಗದಿತ ಸ್ಥಳದ ಲಾಗ್ ಇನ್ ಅಂದರೆ, ಕರ್ತವ್ಯಕ್ಕೆ ಹಾಜರಾಗುವ ಸ್ಥಳ ತೋರಿಸಲಾಗಿದೆ. ಇನ್ನು ಅದೇ ಸ್ಥಳಕ್ಕೆ ಮರು ಆಗಮಿಸಿ ಲಾಗ್ ಓಟ್ ಮಾಡಬೇಕು. ಇದು ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂಕಷ್ಟ ಹೆಚ್ಚಳ ಮಾಡಿದೆ. ಬೆಳಗ್ಗೆ ಎದ್ದ ಕೂಡಲೇ ಗಸ್ತು, ಬಂದೋಬಸ್ತ್, ಅಪರಾಧ ತನಿಖೆ, ಕಾನೂನು ಸುವ್ಯವಸ್ಥೆ ಹಾಗೂ ತುರ್ತು ಘಟನೆಗಳ ನಿರ್ವಹಣೆಯಿಂದ ಹಲವು ಬಾರಿ ಕಚೇರಿಗೆ ಆಗಮಿಸುವುದು ಕಷ್ಟವಾಗುತ್ತದೆ. ಇನ್ನು ದೊಡ್ಡ ಕಾರ್ಯಕ್ರಮಗಳ ಬಂದೋಬಸ್ತ್, ವಿವಿಐಪಿ ಭದ್ರತೆ, ಅಪರಾಧಿಗಳ ಹಿಂದೆ ಓಡಾಟದ ವೇಳೆ ಹಲವು ದಿನ ಕಚೇರಿಯಿಂದ ದೂರ ಇರಬೇಕಾಗುತ್ತದೆ. ಇಂತಹ ವೇಳೆ ಆ್ಯಪ್ನಲ್ಲಿಗೈರು ಹಾಜರಿ ನಮೂದಾಗುತ್ತಿದೆ. ಸದ್ಯ ಆ್ಯಪ್ ಯೂಸ್ ಮಾಡದಿದ್ದರು, ಸಂಬಳ ಕಡಿತ ಆಗುತ್ತಿಲ್ಲ. ಆದರೆ, ಮುಂದೊಂದು ದಿನ ಆ್ಯಪ್ ಲೆಕ್ಕಕ್ಕೆ ತೆಗೆದುಕೊಂಡರೆ ನಮ್ಮ ಸಂಬಳ ಕೈಸೇರುವುದು ದುಸ್ತರ ಎನ್ನುತ್ತಾರೆ ಸಿಬ್ಬಂದಿಗಳು.
