Ashwini Gowda's grand comeback to television: Which serial? - ಕಿರುತೆರೆಗೆ ಅಶ್ವಿನಿ ಗೌಡ ಭರ್ಜರಿ ಕಂಬ್ಯಾಕ್: ಯಾವ ಸೀರಿಯಲ್?
ನಟಿ, ʻಬಿಗ್ ಬಾಸ್ʼ ಅಶ್ವಿನಿ ಗೌಡ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ʻಬಿಗ್ ಬಾಸ್ ಕನ್ನಡ ಸೀಸನ್ 12’ರ ಬಳಿಕ ತಮ್ಮ ಮುಂದಿನ ಹೆಜ್ಜೆ ಏನಿರಬಹುದು ಎಂಬ ಕುತೂಹಲಕ್ಕೆ ತೆರೆ ಎಳೆದಿರುವ ನಟಿ, ʻಓ ಮನಸೇʼ ಎಂಬ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೀರೋ ಯಾರು? ಈ ಬಗ್ಗೆ ಇಲ್ಲಿದೆ ನೋಡಿ ಡೀಟೇಲ್ಸ್..
ಹೈಲೈಟ್ಸ್:
- ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡಿದ ʻಬಿಗ್ ಬಾಸ್ʼ ಅಶ್ವಿನಿ ಗೌಡ.
- ʻಓ ಮನಸೇʼ ಧಾರಾವಾಹಿ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ‘ರಾಜಮಾತೆ’!
- ʻಸ್ಟಾರ್ ಸುವರ್ಣʼದಲ್ಲಿ ಶೀಘ್ರದಲ್ಲೇ ಹೊಸ ಕಥೆ ಶುರು.
![]()
ನಟಿ ಅಶ್ವಿನಿ ಗೌಡ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳಿದ್ದಾರೆ. ʻಬಿಗ್ ಬಾಸ್ ಕನ್ನಡ ಸೀಸನ್ 12’ರ ರಿಯಾಲಿಟಿ ಶೋ ನಂತರ ವೇದಿಕೆ ಕಾರ್ಯಕ್ರಮಗಳಲ್ಲಿ ಸಖತ್ ಬ್ಯುಸಿಯಾಗಿದ್ದ ಅಶ್ವಿನಿ ಗೌಡ ಇದೀಗ, ‘ಸ್ಟಾರ್ ಸುವರ್ಣ’ ವಾಹಿನಿಯ ಹೊಚ್ಚ ಹೊಸ ‘ಓ ಮನಸೇ’ ಧಾರಾವಾಹಿ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಬಿಗ್ ಬಾಸ್’ ಶೋ ಮೂಲಕ ಗಮನ ಸೆಳೆದಿದ್ದ ಅಶ್ವಿನಿ ಗೌಡ ಅವರನ್ನ ‘ರಾಜಮಾತೆ’ ಎಂದೇ ಕರೆಯುತ್ತಾರೆ. ಶೋ ಮುಗಿದ ನಂತರ ಕೆಲವು ವೇದಿಕೆ ಕಾರ್ಯಕ್ರಮಗಳು ಹಾಗೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ರೂ, ಪೂರ್ಣಪ್ರಮಾಣದ ಧಾರಾವಾಹಿಯಲ್ಲಿ ಅಶ್ವಿನಿ ಗೌಡ ನಟಿಸಿ ತುಂಬಾ ವರ್ಷಗಳೇ ಆಗಿದ್ದವು. ಈ ಹಿಂದೆ ‘ರಾಧೆ ಶ್ಯಾಮ’, ʻಕಾವೇರಿʼ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ರಂಜಿಸಿದ್ದ ಅಶ್ವಿನಿ ಗೌಡ, ಈಗ ಹಲವು ವರ್ಷಗಳ ನಂತರ ಮತ್ತೆ ಗಂಭೀರ ಹಾಗೂ ಪವರ್ಫುಲ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮುಂದೆ ಬರಲಿದ್ದಾರೆ.
‘ಓ ಮನಸೇ’.. ವಿಭಿನ್ನ ಮನಸ್ಥಿತಿ ಮತ್ತು ಭಿನ್ನ ನಂಬಿಕೆಗಳನ್ನ ಹೊಂದಿರುವ ಇಬ್ಬರು ವ್ಯಕ್ತಿಗಳ ನಡುವೆ ಚಿಗುರುವ ಅಸಾಧ್ಯ ಪ್ರೇಮಕಥೆಯನ್ನ ಹೊಂದಿರುವ ಧಾರಾವಾಹಿ. ಈ ಕಥೆಯಲ್ಲಿ ಅಶ್ವಿನಿ ಗೌಡ ಅವರ ಪಾತ್ರವು ಪ್ರಮುಖ ಟ್ವಿಸ್ಟ್ಗಳಿಗೆ ಕಾರಣವಾಗುವ ಹಾಗೂ ಖಡಕ್ ಅವತಾರದಲ್ಲಿದೆ ಎನ್ನಲಾಗಿದೆ.
ಈ ಧಾರಾವಾಹಿಯಲ್ಲಿ ಕಿರುತೆರೆಯ ಜನಪ್ರಿಯ ನಟ ದರ್ಶಕ್ ಗೌಡ ನಾಯಕನಾಗಿ ಶ್ರೀಮಂತ ಬಿಸಿನೆಸ್ಮ್ಯಾನ್ ಪಾತ್ರದಲ್ಲಿ ನಟಿಸ್ತಿದ್ದಾರೆ. ನಾಯಕಿಯಾಗಿ ತಮಿಳು ಹಾಗೂ ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಮಧುಮಿತ ಗೌಡ ಅಭಿನಯಿಸುತ್ತಿದ್ದಾರೆ. ಇವರಿಬ್ಬರ ಜೊತೆಗೆ ಅಶ್ವಿನಿ ಗೌಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʻಸ್ಟಾರ್ ಸುವರ್ಣʼ ವಾಹಿನಿ ರಿಲೀಸ್ ಮಾಡಿರುವ ಈ ಧಾರಾವಾಹಿಯ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಶ್ವಿನಿ ಗೌಡ ಅವರ ಹೊಸ ಲುಕ್ ಮತ್ತು ನಟನೆ ವೀಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಶೀಘ್ರದಲ್ಲೇ ‘ಓ ಮನಸೇ’ ಧಾರಾವಾಹಿ ಪ್ರಸಾರವಾಗಲಿದೆ.
ಅಶ್ವಿನಿ ಗೌಡ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ʻರಾಜಾಹುಲಿʼ ಸಿನಿಮಾದಲ್ಲಿನ ಅವರ ಪಾತ್ರ ಟ್ರೆಂಡಿಂಗ್ನಲ್ಲಿದೆ. ಸಿನಿಮಾಗಳಲ್ಲಿ ನಟಿಸುತ್ತಿದ್ದರಾದರೂ, ಕಿರುತೆರೆಯಿಂದ ದೊಡ್ಡ ಬ್ರೇಕ್ ಪಡೆದಿದ್ದರು. ಇದೀಗ ʻಓ ಮನಸೇʼ ಧಾರಾವಾಹಿ ಮೂಲಕ ಅಶ್ವಿನಿ ಗೌಡ ಕಿರುತೆರೆಗೆ ಕಂಬ್ಯಾಕ್ ಮಾಡ್ತಿದ್ದಾರೆ.
