‘Premada Urali’ effect: Owners hesitant to give screens to ‘Jailer 2’ and ‘Raanbali’? ಪರಭಾಷೆಯ ಬ್ಲಾಕ್ಬಸ್ಟರ್ ಸಿನಿಮಾಗಳ ಆರ್ಭಟಕ್ಕೆ ಕನ್ನಡ ಸಿನಿಮಾಗಳು ಥಿಯೇಟರ್ ಸಿಗದೇ ಪರದಾಡುತ್ತಿದ್ದ ದಿನಗಳಿದ್ದವು. ಆದರೆ, ಈಗ ಗಾಂಧಿನಗರದ ಚಿತ್ರಣ ಸಂಪೂರ್ಣ ಚೇಂಜ್ ಆಗಿದೆ. ದಕ್ಷಿಣ ಭಾರತದ ಎರಡು ದೊಡ್ಡ ಸಿನಿಮಾಗಳಾದ ʻಜೈಲರ್ 2ʼ ಹಾಗೂ ʻರಣಬಾಲಿʼ ರಿಲೀಸ್ಗೆ ಸಜ್ಜಾಗುತ್ತಿದ್ದರೂ, ಕರ್ನಾಟಕದ ಥಿಯೇಟರ್ ಮಾಲೀಕರು ಮತ್ತು ಪ್ರದರ್ಶಕರು ಮಾತ್ರ ಈ ಸಿನಿಮಾಗಳನ್ನ ನೆಚ್ಚಿಕೊಳ್ಳಲು ತುದಿಗಾಲಲ್ಲಿ ನಿಂತಿಲ್ಲ. ಅದಕ್ಕೆ ಕಾರಣ ʻಪ್ರೇಮದ ಊರಲಿʼ!
- ʻಜೈಲರ್ 2ʼ ಹಾಗೂ ʻರಣಬಾಲಿʼ ಸಿನಿಮಾಗಳ ರಿಲೀಸ್ಗೂ ಥಿಯೇಟರ್ ಓನರ್ಸ್ ಆಸಕ್ತಿ ತೋರುತ್ತಿಲ್ಲ!
- ʻಪ್ರೇಮದ ಊರಲಿ’ ಹೌಸ್ಫುಲ್ ಪ್ರದರ್ಶನದಿಂದಾಗಿ ಬದಲಾದ ಗಾಂಧಿನಗರದ ಟ್ರೆಂಡ್!`
- ಕೇವಲ ಕರ್ನಾಟಕವಷ್ಟೇ ಅಲ್ಲ, ಟಾಲಿವುಡ್ ಬಾಕ್ಸಾಫೀಸ್ನಲ್ಲೂ ‘ಪ್ರೇಮದ ಊರಲಿ’ ಕಮಾಲ್!
![]()
ಪರಭಾಷೆಯ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಥಿಯೇಟರ್ಗಳನ್ನ ಆಕ್ರಮಿಸಿಕೊಳ್ಳುತ್ತಿದ್ದ ಕಾಲವೀಗ ಬದಲಾಗುತ್ತಿದ್ದು, ಕನ್ನಡ ನೆಲದಲ್ಲಿ ಕನ್ನಡ ಸಿನಿಮಾವೇ ಸಾರ್ವಭೌಮ ಎಂಬುದನ್ನ ಪ್ರೇಕ್ಷಕರು ಹಾಗೂ ಥಿಯೇಟರ್ ಮಾಲೀಕರು ಸಾಬೀತುಪಡಿಸುತ್ತಿದ್ದಾರೆ. ಕಾಲಿವುಡ್ನ ಬಹುನಿರೀಕ್ಷಿತ ʻಜೈಲರ್ 2ʼ ಹಾಗೂ ತೆಲುಗಿನ ʻರಣಬಾಲಿʼಯಂತಹ ಪ್ಯಾನ್ ಇಂಡಿಯಾ ಬಿಗ್ ಸ್ಟಾರ್ ಸಿನಿಮಾಗಳು ರಿಲೀಸ್ಗೆ ಸಮೀಪಿಸುತ್ತಿದ್ರೂ, ಕರ್ನಾಟಕದ ಥಿಯೇಟರ್ ಮಾಲೀಕರು ಮತ್ತು ಪ್ರದರ್ಶಕರು ಅವುಗಳಿಗೆ ಆದ್ಯತೆ ನೀಡಲು ಆಸಕ್ತಿ ತೋರಿಸುತ್ತಿಲ್ಲ.. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.
ರಿಲೀಸ್ ಆಗಿ ವಾರಗಳು ಕಳೆದರೂ ಥಿಯೇಟರ್ಗಳಲ್ಲಿ ʻಪ್ರೇಮದ ಊರಲಿʼ ಅಲೆಗೆ ನೋ ಸ್ಟಾಪ್!
ಅಂದಹಾಗೆ, ಇದಕ್ಕೆ ಮುಖ್ಯ ಕಾರಣ ಕನ್ನಡದ ʻಪ್ರೇಮದ ಊರಲಿʼ ಸಿನಿಮಾದ ಅಬ್ಬರ. ಹೌದು.. ರಿಲೀಸ್ ಆಗಿ ವಾರಗಳು ಕಳೆದರೂ ಥಿಯೇಟರ್ಗಳಲ್ಲಿ ʻಪ್ರೇಮದ ಊರಲಿʼ ಅಲೆಯು ಕೊಂಚವೂ ಕಡಿಮೆಯಾಗಿಲ್ಲ. ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವನ್ನ ತೆಗೆದು ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳಿಗೆ ಸ್ಕ್ರೀನ್ಗಳನ್ನ ನೀಡೋದು ಆರ್ಥಿಕವಾಗಿ ಯಾವುದೇ ಲಾಭವಲ್ಲ ಎಂದು ಕೆಲ ಥಿಯೇಟರ್ ಓನರ್ಗಳು ಭಾವಿಸಿದ್ದಾರೆ. ಸ್ಥಳೀಯ ಪ್ರೇಕ್ಷಕರಿಂದ ಸಿಗ್ತಿರುವ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಸಪೋರ್ಟ್ ಹಾಗೂ ಪ್ರೇಮದ ಕಥಾಹಂದರಕ್ಕೆ ಮನಸೋತಿರುವ ಪ್ರೇಕ್ಷಕರು ಹೌಸ್ಫುಲ್ ಬೋರ್ಡ್ ತಗುಲಿಸುತ್ತಿರುವುದೇ ಈ ಚೇಂಜಸ್ಗೆ ಪ್ರಮುಖ ಕಾರಣ.
ಅಷ್ಟೇ ಅಲ್ಲದೇ, ಈ ಕನ್ನಡ ಸಿನಿಮಾದ ಹವಾ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ʻಪ್ರೇಮದ ಊರಲಿʼ ಸಿನಿಮಾ ಗಡಿ ದಾಟಿ ಟಾಲಿವುಡ್ನಲ್ಲೂ ಅದ್ಭುತ ಕಮಾಲ್ ಮಾಡುತ್ತಿದೆ. ಅಲ್ಲಿನ ಬಾಕ್ಸಾಫೀಸ್ನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ ತೆಲುಗು ಪ್ರೇಕ್ಷಕರ ಪ್ರಶಂಸೆಗೆ ಕೂಡ ಪಾತ್ರವಾಗಿದೆ. ಇದರಿಂದಾಗಿ ನೆರೆರಾಜ್ಯದಲ್ಲೂ ಕನ್ನಡ ಸಿನಿಮಾದ ತಾಕತ್ತು ಏನು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಸಾಮಾನ್ಯವಾಗಿ ಪರ ಭಾಷೆಯ ದೊಡ್ಡ ನಟರ ಸಿನಿಮಾಗಳು ಬಂದಾಗ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಅಭಾವ ಎದುರಾಗುತ್ತಿತ್ತು. ಆದರೆ, ʻಪ್ರೇಮದ ಊರಲಿʼ ಸಿನಿಮಾ ಆ ಸಾಂಪ್ರದಾಯಿಕ ಚಿತ್ರಣವನ್ನೇ ಬದಲಾಯಿಸಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ʻಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮʼ ಎಂಬ ಮಾತನ್ನ ಅಕ್ಷರಶಃ ಸತ್ಯವಾಗಿಸಿರುವ ಈ ಸಿನಿಮಾ, ಉತ್ತಮ ವಿಷಯಾಧಾರಿತ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಮತ್ತು ಪ್ರದರ್ಶಕರ ಬೆಂಬಲ ಸದಾ ಇರುತ್ತದೆ ಎಂಬುದನ್ನ ಮತ್ತೊಮ್ಮೆ ಬಲವಾಗಿ ನಿರೂಪಿಸಿದೆ.
