Sonu Nigam: Fear of protests against Sonu Nigam’s show in Bengaluru – ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಕನ್ನಡದಲ್ಲಿ ಅಪಾರ ಫಾಲೋವರ್ಸ್ನ ಹೊಂದಿದ್ದಾರೆ. ಬಾಲಿವುಡ್ನ ಹಾಡುಗಳು ಎಷ್ಟು ಖ್ಯಾತಿ ಇದೆಯೋ ಅದೇ ರೀತಿ ಬೇರೆ ಬೇರೆ ಭಾಷೆಗಳಲ್ಲಿಯೂ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ 2025ರಲ್ಲಿ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರು ಕರ್ನಾಟದಲ್ಲಿ ವಿರೋಧ ಎದುರಿಸಿದರು. ಇದೀಗ ಅವರು ಕನ್ಸರ್ಟ್ಗಾಗಿ ಬೆಂಗಳೂರಿಗೆ ಬರೋಕೆ ರೆಡಿಯಾಗಿದ್ದಾರೆ. ಆದರೆ ಇತ್ತ ಸೋನು ನಿಗಂ ಬಂದರೆ ಪಕ್ಕಾ ಪ್ರತಿಭಟನೆ ಅಂತ ಕನ್ನಡ ಸಂಘಟನೆಗಳು ರೆಡಿಯಾಗಿವೆ.

ಸದ್ಯ ಸೋನು ನಿಗಂ ಅವರ ಮುಂಬರುವ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆಯ ಬಿಸಿ ತಟ್ಟಿದೆ. ಕರವೇ ಸದ್ಯ ಸಿಟಿ ಪೊಲೀಸ್ ಬಳಿ ಅಕ್ಟೋಬರ್ 24ರಂದು ಆಯೋಜಿಸಲಾಗುತ್ತಿರುವ ಸೋನು ನಿಗಂ ಕನ್ಸರ್ಟ್ಗೆ ಅವಕಾಶ ಅನುಮತಿಸದಂತೆ ಕೋರಿದೆ.
ಬೆಂಗಳೂರು ಸಿಟಿ ಪೊಲೀಸ್ಗೆ ಪತ್ರ ಬರೆದ ಕರವೇ ರಾಜ್ಯಧ್ಯಕ್ಷ ಟಿಎ ನಾರಾಯಣ ಗೌಡ ಅವರು ಸೋನು ನಿಗಮ್ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಕನ್ನಡ ಹಾಡು ಹಾಡಿ ಎಂದು ಜನ ಡಿಮ್ಯಾಂಡ್ ಮಾಡಿದ್ದನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ಮಾತನಾಡಿದ್ದರು.
ಎಎನ್ಐ ಪ್ರಕಾರ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ಗೆ ಪತ್ರ ಬರೆದು, ಸೋನು ನಿಗಮ್ ಕನ್ನಡಿಗರನ್ನು ಅವಮಾನಿಸಿದ್ದಾರೆ. ಕಳೆದ ವರ್ಷ ನೀಡಿದ ದೂರಿಗೆ ಕ್ರಮ ಕೈಗೊಳ್ಳಿ. ಕನ್ನಡಿಗರು ಆ ಗಾಯವನ್ನು ಇನ್ನೂ ಮರೆತಿಲ್ಲ ಎಂದಿದ್ದಾರೆ.
2025ರಲ್ಲಿ ಸೋನು ನಿಗಮ್ ಅವರು ಬೆಂಗಳೂರು ಇವೆಂಟ್ನಲ್ಲಿ ಹಾಡಿದ್ದಾಗ ವಿವಾದ ಶುರುವಾಗಿದೆ. ಪ್ರೇಕ್ಷಕರ ಮಧ್ಯೆ ಇದ್ದ ಒಂದು ಗುಂಪು ಕನ್ನಡ ಹಾಡಿಗಾಗಿ ಡಿಮ್ಯಾಂಡ್ ಮಾಡಿತ್ತು. ಕನ್ನಡ ಕನ್ನಡ ಕನ್ನಡ ಎಂದು ಕೂಗಿದ್ದರು. ಕನ್ನಡ, ಕನ್ನಡ, ಕನ್ನಡ ಇದೇ ಕಾರಣಕ್ಕೆ ಪಹಲ್ಗಾಮ್ ಘಟನೆ ನಡೆಯಿತು ಎಂದು ಸೋನು ನಿಗಮ್ ಹೇಳಿದ್ದರು. ಕರವೇ ಈ ಹೇಳಿಕೆ ಆಕ್ಷೇಪಾರ್ಹ ಎಂದಿದ್ದು, ಇದು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ಎಂದಿದ್ದರು. ಕನ್ನಡ ಹಾಡನ್ನು ಕೇಳುವುದು ಅಪರಾಧವೇ? ಕನ್ನಡ ಪ್ರೇಮವನ್ನು ಉಗ್ರದಾಳಿಗೆ ಹೋಲಿಸೋಕೆ ಸೋನು ನಿಗಮ್ಗೆ ಯಾರು ಹಕ್ಕು ಕೊಟ್ಟರು ಎಂದು ಕರವೇ ಪ್ರಶ್ನಿಸಿದೆ.
ಮೇ 3 2025ರಂದು ಸೋನು ನಿಗಮ್ ಅವರು ಈ ವಿವಾದಕ್ಕೆ ಪ್ರತಿಕ್ರಿಯಿಸಿ ವಿಡಿಯೋ ಶೇರ್ ಮಾಡಿದ್ದರು. ನಾಲ್ಕು, ಐದು ಬಾರಿ ಕನ್ನಡ ಹಾಡಿಗಾಗಿ ಬೆದರಿಸಿದ್ದಾರೆ. ಶೋ ಆರಂಭದಿಂದಲೇ ಕೆಲವರು ಶುರು ಮಾಡಿದ್ದರು. ನನ್ನ ಶೋ ಶುರು ಕೂಡಾ ಆಗಿರಲಿಲ್ಲ. ಆಗಲೇ ಕೆಲವರು ನನ್ನನ್ನು ಕಟುವಾಗಿ ನೋಡಿ ಕನ್ನಡ ಹಾಡಿಗೆ ಡಿಮ್ಯಾಂಡ್ ಮಾಡಿದ್ದರು ಎಂದಿದ್ದಾರೆ.
