Robot Crime: Robot sexually assaults minor girl! Police arrest man for following her and doing ‘bad touch’..? –ಘಟನೆ ನಡೆದಾಗ ಹುಡುಗಿ ನಗರ ಕೇಂದ್ರದ ಬಳಿಯ ಫಾಸ್ಟ್ ಫುಡ್ ಅಂಗಡಿಯ ಮುಂದೆ ಇದ್ದಳು ಎಂದು ಪೊಲೀಸರು ತಿಳಿಸಿದ್ದು, ಯುವಕನೊಬ್ಬ ಈ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ.
ಹೌದು.. ನೀವು ಟೈಟಲ್ನಲ್ಲಿ ಓದಿರೋದು ನಿಜ.. ಇದು ಅಚ್ಚರಿ ಅನ್ನಿಸಿದರೂ ಸತ್ಯ.. ಅಪ್ರಾಪ್ತ ವಯಸ್ಸಿನ ಬಾಲಕಿಗೆ ರೋಬೋಟ್ ಒಂದು ಲೈಂಗಿಕ ದೌರ್ಜನ್ಯ ನೀಡಿದ ಘಟನೆ ಜರ್ಮನಿಯಲ್ಲಿ ನಡೆದಿದೆ- ಹೌದು.. ಜರ್ಮನ್ನ ಪಶ್ಚಿಮ ನಗರ ಕಲೋನ್ನಲ್ಲಿ ಮಧ್ಯರಾತ್ರಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಯುವಕರಿಂದ ನಿಯಂತ್ರಿಸಲ್ಪಟ್ಟ ರೋಬೋಟ್ ಒಂದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿದೆ. ಸುಮಾರು 1.2 ಮೀಟರ್ ಎತ್ತರದ ರೋಬೋಟ್ ಅಪ್ರಾಪ್ತೆ ಬಳಿ ಬಂದು ಆಕೆಯ ದೇಹ ಮತ್ತು ಖಾಸಗಿ ಭಾಗವನ್ನು ಮುಟ್ಟಿ ಅಶ್ಲೀಲವಾಗಿ ಸ್ಪರ್ಶಿಸಿದೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದಾಗ ಹುಡುಗಿ ನಗರ ಕೇಂದ್ರದ ಬಳಿಯ ಫಾಸ್ಟ್ ಫುಡ್ ಅಂಗಡಿಯ ಮುಂದೆ ಇದ್ದಳು ಎಂದು ಪೊಲೀಸರು ತಿಳಿಸಿದ್ದು, ಯುವಕನೊಬ್ಬ ಈ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ. ಪೊಲೀಸರು ರೋಬೋಟ್ ಮತ್ತು ಶಂಕಿತರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
ವರದಿಯ ಪ್ರಕಾರ, ಅಕ್ಟೋಬರ್ 10ರಂದು ರಾತ್ರಿ ಸುಮಾರು 11:45ಕ್ಕೆ ಜರ್ಮನಿಯ ಕಲೋನ್ನ ಕೇಂದ್ರ ಪ್ರದೇಶದಲ್ಲಿರುವ ಫಾಸ್ಟ್-ಫುಡ್ ರೆಸ್ಟೋರೆಂಟ್ನ ಹೊರಗೆ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಸುಮಾರು 1.2 ಮೀಟರ್ ಎತ್ತರದ ರೋಬೋಟ್ 16 ವರ್ಷದ ಅಪ್ರಾಪ್ತೆಯನ್ನು ಹಿಂಬಾಲಿಸಿದೆ. ಅದು ಆಕೆಯ ದೇಹದ ಭಾಗಗಳನ್ನು ಮುಟ್ಟಿ ತಳ್ಳಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಶಂಕಿತ ಆರೋಪಿಗಳ ವೋಕ್ಸ್ವ್ಯಾಗನ್ ಕಾರಿನ ಟ್ರಂಕ್ನಲ್ಲಿ ರೋಬೋಟ್ ಇರುವುದು ಕಂಡುಬಂದಿದೆ. ಆ ರೋಬೋಟ್ಗೆ ತೋಳಿಲ್ಲದ ಶರ್ಟ್ ಮತ್ತು ಸ್ಪೋರ್ಟ್ಸ್ ಪೈಜಾಮಾ ಧರಿಸಲಾಗಿತ್ತು. ಘಟನೆ ಸಂಬಂಧ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
