A for Anand Movie: A Bollywood actor’s entry in Shivanna’s ‘A for Anand’! Who is it? –ಎ ಫಾರ್ ಆನಂದ್ ಚಿತ್ರದ ಕಲಾವಿದರ ಬಳಗ ದಿನೇ ದಿನೇ ಹೆಚ್ಚಾಗುತ್ತಿದೆ. ರವೀನಾ ಟಂಡನ್ ಆದ್ಮೇಲೆ ಬಾಲಿವುಡ್ನ ನಟರೊಬ್ಬರ ಎಂಟ್ರಿ ಆಗಿದೆ. ಈ ಚಿತ್ರ ಇವರಿಗೆ ಎರಡನೇ ಚಿತ್ರವೇ ಆಗಿದೆ. ಇವರ ಬಗ್ಗೆ ಚಿತ್ರ ತಂಡವೇ ಅಧಿಕೃತವಾಗಿ ಮಾಹಿತಿ ಕೊಟ್ಟಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಶಿವರಾಜ್ ಕುಮಾರ್ ಅಭಿನಯದ ‘ಎ ಫಾರ್ ಆನಂದ್’ ಚಿತ್ರದ ಕಲಾವಿದರ ಸಂಖ್ಯೆ ಹಿಗ್ಗುತ್ತಿದೆ. ದಿನೇ ದಿನೇ ಚಿತ್ರ ತಂಡ ಒಂದೊಂದು ಪಾತ್ರವನ್ನ ಪರಿಚಯ ಮಾಡಿಸುತ್ತಿದೆ. ಮೊದಲು ರವೀನಾ ಟಂಡನ್ ಬಂದ್ರು. ಇವರಾದ್ಮೇಲೆ ತಾರಾ ಅನುರಾಧಾ ಆಗಮಿಸಿದರು. ಇದೀಗ ಅನಂತ್ ನಾರಾಯಣ್ ಮಹಾದೇವನ್ ಬಂದಿದ್ದಾರೆ. ಇವರ ಪರಿಚಯದ ಒಂದು ವಿಡಿಯೋ ಕೂಡ ಹೊರ ಬಂದಿದೆ.
ಅನಂತ್ ನಾರಾಯಣ್… – ಬಾಲಿವುಡ್ನ ಹಿರಿಯ ನಟ ಮತ್ತು ನಿರ್ದೇಶಕ ಅನಂತ್ ನಾರಾಯಣ್ ಮಹಾದೇವನ್ ಕನ್ನಡಕ್ಕೆ ಬಂದಿದ್ದಾರೆ. ಎರಡನೇ ಬಾರಿ ಇವರು ಬಂದಿದ್ದಾರೆ ಅಂತಲೇ ಹೇಳಬಹುದು.

ಈ ಹಿಂದೆ ಇವರು ಪಿ.ಶೇಷಾದ್ರಿ ಅವರ ಸಿನಿಮಾ ಮಾಡಿದ್ದರು. ಮೋಹನ್ದಾಸ್ ಹೆಸರಿನ ಈ ಚಿತ್ರ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಅಲ್ಲಿ ಬಂದಿತ್ತು. 2019 ರಂದು ಇದು ತೆರೆ ಕಂಡಿತ್ತು. ಇದರಲ್ಲಿ ಮಹಾತ್ಮಾ ಗಾಂಧಿ ಅವರ ತಂದೆ ಕರಮಚಂದ್ ಗಾಂಧಿ ಪಾತ್ರವನ್ನೆ ಅನಂತ್ ಮಹಾದೇವನ್ ಮಾಡಿದ್ದರು.
ಎರಡನೇ ಸಿನಿಮಾ: ಅನಂತ್ ಮಹಾದೇವನ್ ಈಗ ಎರಡನೇ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಎ ಫಾರ್ ಆನಂದ್ ಚಿತ್ರದಲ್ಲಿಯೇ ಇವರು ಅಭಿನಯಿಸುತ್ತಿದ್ದಾರೆ.
ಅನಂತ್ ವಿಶೇಷ ವಿಡಿಯೋ : ಎ ಫಾರ್ ಆನಂದ್ ಚಿತ್ರ ತಂಡ ಅನಂತ್ ಮಹಾದೇವನ್ ಅವರ ವಿಡಿಯೋ ಬಿಟ್ಟಿದೆ. ಇವರ ಎಂಟ್ರಿ ಮತ್ತು ರೆಡಿ ಆಗುವ ವಿಡಿಯೋ ರಿಲೀಸ್ ಮಾಡಿದೆ.
ಈ ಮೂಲಕ ಚಿತ್ರದಲ್ಲಿ ಅನಂತ್ ಮಹಾದೇವನ್ ಇದ್ದಾರೆ ಅನ್ನುವುದು ಗೊತ್ತಾಗುತ್ತದೆ. ಈ ಚಿತ್ರದ ಶೂಟಿಂಗ್ ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ನಡೀತಿದೆ. ಅನಂತ್ ನಾರಾಯಣ್ ಮಹಾದೇವನ್ ಅವರ ಪಾತ್ರದ ಶೂಟಿಂಗ್ ಕೂಡ ಇಲ್ಲಿಯೇ ನಡೆಯುತ್ತಿದೆ.
