Invitation to T.A.Sharavan for Dubai Kannada Rajyotsava !. - ದುಬೈನಲ್ಲಿ ಕನ್ನಡಿಗರ ಕೂಟದ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಎಂ.ಕೆ., ಪ್ರಧಾನ ಕಾರ್ಯದರ್ಶಿ ಶ್ರೀ ಚೇತನ್ ಸುಬ್ರಮಣ್ಯ ಹಾಗೂ ಜಂಟಿ ಕಾರ್ಯದರ್ಶಿ ಶ್ರೀ ದೀಪಕ್ ಸೋಮಶೇಖರ ಅವರು ಆತ್ಮೀಯವಾಗಿ ಸನ್ಮಾನಿಸಿ, ನವೆಂಬರ್ 22ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ದುಬೈನಲ್ಲಿ ತೋರಿದ ಪ್ರೀತಿ, ಆತ್ಮೀಯತೆ ಹಾಗೂ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳು. ವಿದೇಶದಲ್ಲಿಯೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಸಂಭ್ರಮದಿಂದ ಆಚರಿಸುವ ಕನ್ನಡಿಗರ ಒಗ್ಗಟ್ಟು ಸಂತಸ ತಂದಿತು.

