A terrible accident occurred during the delivery of a new car on the day of Ayudha Puja..! - ಬ್ಯಾರಿಕೇಡ್ ದಾಟಿ ಬೈಕ್ಗೆ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ..!!
ಸಾಗರ: ದಸರಾ ಸಂಭ್ರಮದ ನಡುವೆ ಹೊಸ ಕಾರು ಡೆಲಿವರಿ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಸಾಗರ ನಗರದಲ್ಲಿ ನಡೆದಿದೆ.
ಆಯುಧ ಪೂಜೆಯ ದಿನ ಹೊಸ ಕಾರು ಮನೆಗೆ ಕೊಂಡೊಯ್ಯುವ ಸಂಭ್ರಮದ ನಡುವೆಯೇ ಈ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಸಾಗರದ ಮಾರುತಿ ಕಾರು ಶೋರೂಮ್ನಿಂದ ಹೊರಬಂದ ಹೊಸ ಕಾರು ಏಕಾಏಕಿ ಬ್ಯಾರಿಕೇಡ್ ದಾಟಿ ರಸ್ತೆಗೆ ನುಗ್ಗಿದ್ದು, ಅದೇ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ಗೆ ಬಲವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ! : ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ಸವಾರ ಹಾಗೂ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ಕಾರು ಶೋರೂಮ್ನಿಂದ ರಸ್ತೆಗೆ ನುಗ್ಗಿ ಬೈಕ್ಗೆ ಡಿಕ್ಕಿ ಹೊಡೆಯುವ ಆತಂಕಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಸರಾ ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

