Shree Ram: The city of love is a hero’s paradise during Dussehra! Shri Ram takes off his mask in front of the people – ಮೈಸೂರು ದಸರಾದಲ್ಲಿ ಪ್ರೇಮದ ಊರಲಿ ಚಿತ್ರದ ನಾಯಕ ಶ್ರೀರಾಮ್ ಜನರನ್ನ ನೋಡಿ ತುಂಬಾನೆ ಖುಷಿಪಟ್ಟರು. ಅಷ್ಟೆ ಪ್ರೀತಿಯಿಂದಲೇ ಜನರ ಲಟಿಕೆ ಕೂಡ ತೆಗೆದರು. ನಾಯಕಿ ತಪಸ್ವಿನಿ ಪೂಣಚ್ಚ ಸಹ ಇಲ್ಲಿ ಎಲ್ಲರ ಗಮನ ಸೆಳೆದರು. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೈಸೂರು ದಸರಾ ಈ ವರ್ಷ ವಿಶೇಷವಾಗಿಯೇ ಆಗಿದೆ. ಇಡೀ ಸ್ಯಾಂಡಲ್ವುಡ್ ತಾರೆಯರು ಈ ಸಲ ದಸರಾ ಸಡಗರದಲ್ಲಿ ಭಾಗಿ ಆಗಿದ್ದರು. ಇಲ್ಲಿ ಇನ್ನೂ ಒಂದು ವಿಶೇಷ ಇತ್ತು. ಅದು ಪ್ರೇಮದ ಊರಲಿ ಸಿನಿಮಾದ ನಾಯಕನ ವಿಷಯವೇ ಆಗಿದೆ. ಈ ಚಿತ್ರದ ನಾಯಕ ಶ್ರೀರಾಮ್ ಇಲ್ಲಿ ಎಲ್ಲರ ಗಮನ ಸೆಳೆದರು. ತಮ್ಮನ್ನ ನೋಡಿ ಸಂತೋಷ ಪಟ್ಟ ಸಿನಿಮಾ ಪ್ರೇಮಿಗಳ (Cinema Lovers) ಲಟಿಕೆ ತೆಗೆದಿರೋದು ಇದೆ. ಈ ಕ್ಷಣದ ವಿಡಿಯೋ ಕೂಡ ವೈರಲ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ದಸರಾದಲ್ಲಿ..ಪ್ರೇಮದ ಊರಲಿ… ಪ್ರೇಮದ ಊರಲಿ ಸಿನಿಮಾ ಹಿಟ್ ಆಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಕೋಟಿಗಳ ಲೆಕ್ಕದಲ್ಲಿಯೇ ಇದೆ. 60 ಕೋಟಿ ದಾಟಿ ಹೋಗಿದೆ. 100 ಕೋಟಿ ಸಮೀಪ ಇದೆ ಅನ್ನುವ ಸುದ್ದಿನೂ ಇದೆ.

ಇದರ ನಡುವೆ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಹಾಗೂ ನಾಯಕ ನಟ ಶ್ರೀರಾಮ್ ಅವರು ದಸರಾ ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಇಡೀ ಮೈಸೂರು ದಸರಾದಲ್ಲಿ ಕನ್ನಡ ತಾರೆಯರು ಎಲ್ಲರ ಗಮನ ಸೆಳೆದಿದ್ದಾರೆ.
ಪ್ರೇಮದ ಊರಲಿ ಸಿನಿಮಾ ಸೂಪರ್ ಹಿಟ್ ಆಗಿರೋದ್ರಿಂದಲೇ ಈ ಚಿತ್ರದ ನಾಯಕ ಶ್ರೀರಾಮ್ ಹಾಗೂ ತಪಸ್ವಿನಿ ಪೂಣಚ್ಚ ಕೂಡ ಇಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸಿದರು.
ಜನರ ಲಟಿಕೆ ತೆಗೆದ ಶ್ರೀರಾಮ್ : ದಸರಾದಲ್ಲಿ ಈ ಸಲ ಕಲಾವಿದರಿಗಾಗಿಯೇ ವಿಶೇಷ ಬಸ್ ಮಾಡಿದ್ದರು. ಈ ಓಪನ್ ಬಸ್ ಅಲ್ಲಿಯೇ ಕನ್ನಡದ ಕಲಾವಿದರು ನಿಂತಿದ್ದರು. ಈ ಮೂಲಕ ಜನರತ್ತ ಕೈ ಮಾಡಿದರು. ಸಿನಿಮಾ ಪ್ರೇಮಗಳ ಖುಷಿಯನ್ನ ಕಂಡು ಸಂತೋಷ ಪಟ್ಟರು.

ನಾಯಕ ನಟ ಶ್ರೀರಾಮ್ ಇಲ್ಲಿ ಇನ್ನೂ ಒಂದು ಕೆಲಸ ಮಾಡಿದರು. ಜನರನ್ನ ನೋಡಿ ಪ್ರೀತಿಯಿಂದಲೇ ಅವರ ಲಟಿಕೆ ತೆಗೆದು. ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಇದೆ.
ಜಯಮಾಲ ಅವರ ಆಶೀರ್ವಾದ : ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಮೈಸೂರು ಅಲ್ಲಿ ಒಂದು ಕಡೆ ಜಮಾ ಆಗಿದ್ದರು. ಈ ಸಮಯದಲ್ಲಿಯೇ ಶ್ರೀರಾಮ್ ಅವರು ಹಿರಿಯ ನಟಿ ಜಯಮಾಲಾ ಅವರ ಆಶೀರ್ವಾದ ಪಡೆದರು.
ಈ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಅವರು ಬಸ್ ಅಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡರು. ನಟಿ ರುಕ್ಮಿಣಿ ವಸಂತ್ ಪಕ್ಕದಲ್ಲಿಯೇ ಇವರು ಕುಳಿತಿದ್ದರು. ರೀಲ್ ಮತ್ತು ರಿಯಲ್ ರುಕ್ಮಣಿ ಅನ್ನುವ ಹಾಗೆನೂ ಇವರು ಕಾಣಿಸುತ್ತಿದ್ದರು.
ಪ್ರೇಮದ ಊರಲಿ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ಅವರು ರುಕ್ಮಿಣಿ ಅನ್ನುವ ರೋಲ್ ಮಾಡಿದ್ದಾರೆ. ವಸಂತ್ ಅನ್ನುವ ರೋಲ್ ಅನ್ನ ನಟಿ ರಮಿಕಾ ಶಿವು ಮಾಡಿದ್ದಾರೆ.
ಇನ್ನುಳಿದಂತೆ ಪ್ರೇಮದ ಊರಲಿ ಚಿತ್ರದ ನಾಯಕ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಮೈಸೂರು ದಸರಾದಲ್ಲಿ ಎಲ್ಲರ ಗಮನ ಸೆಳೆದರು ಅಂತ ಹೇಳಬಹುದು.
