Mysuru Dasara: Palace, Palace Board belong to the government; Yathindra’s shocking reaction to Pramoda Devi’s annoyance – ಮೈಸೂರಿನಲ್ಲಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವ್ರು, ರಾಜಮನೆತನ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಅಗತ್ಯವಿದೆ ಎಂದಿದ್ದು, ಅಂಬಾರಿ ವಿಚಾರದಲ್ಲಿ ಕೋರ್ಟ್ಗೆ ಹೋಗುವುದಾದ್ರೆ ಹೋಗಲಿ. ಸರ್ಕಾರ ಅಗತ್ಯಕ್ರಮ ತೆಗೆದುಕೊಳ್ಳುತ್ತೆ ಎಂದು ಖಡಕ್ ಆಗಿ ನುಡಿದಿದ್ದಾರೆ.
ಮೈಸೂರು (ಅ.26): ಈ ಬಾರಿಯ ನಾಡಹಬ್ಬ ದಸರಾ ಆಯೋಜನೆಯಲ್ಲಿ ನಡೆದ ಕೆಲ ಘಟನೆ ಹಾಗೂ ವಿಚಾರಗಳ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವ್ರು ಅಸಮಾಧಾನ ಹೊರಹಾಕಿದ್ರು. ಈ ಬಗ್ಗೆ ಮೈಸೂರಿನಲ್ಲಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವ್ರು, ರಾಜಮನೆತನ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಅಗತ್ಯವಿದೆ ಎಂದಿದ್ದು, ಅಂಬಾರಿ ವಿಚಾರದಲ್ಲಿ ಕೋರ್ಟ್ಗೆ ಹೋಗುವುದಾದ್ರೆ ಹೋಗಲಿ. ಸರ್ಕಾರ ಅಗತ್ಯಕ್ರಮ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಅಲ್ಲದೇ ಅರಮನೆ, ಪ್ಯಾಲೇಸ್ ಬೋರ್ಡ್ ಸರ್ಕಾರದ್ದು, ಅವರು ಹೇಳಿದಂತೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಯತೀಂದ್ರ ಅವ್ರು ಖಡಕ್ ಉತ್ತರ ನೀಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ದಸರಾ ನಡೆಸುತ್ತಿದೆ : ನಾಡ ಹಬ್ಬದಲ್ಲಿ ಸರ್ಕಾರಿ ದಸರಾಕ್ಕೆ ಮಹತ್ವವಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಯತೀಂದ್ರ ಅವ್ರು, 1971 ರಿಂದ ಸರ್ಕಾರ ಅಧಿಕೃತ ದಸರಾ ನಡೆಸುತ್ತಿದೆ. ಸ್ವತಂತ್ರ್ಯ ಬಂದ ಮೇಲೆ ನಾಡಹಬ್ಬ ಆಗಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ದಸರಾ ನಡೆಸುತ್ತಿದೆ. ಹೀಗಾಗಿ ನಾವು ಮುಂದುವರಿಸುತ್ತೇವೆ. ಪತ್ರದಲ್ಲಿ ಏನೇ ಬರೆದಿರಲಿ ಸಮಸ್ಯೆ ಬಗೆಹರಿಸಲು ನಾವು ಸಿದ್ಧ. ಮಾತುಕತೆ ಮೂಲಕ ನಾವು ಸಿದ್ಧರಿದ್ದೇವೆ ಎಂದು ಯತೀಂದ್ರ ಹೇಳಿದ್ದಾರೆ.
‘ದಸರಾ ನಡೆಸೋದು ಸರ್ಕಾರ’ : ಸರ್ಕಾರ ನಡೆಸುವ ದಸರಾ ನಡೆಸಲು ಅವಕಾಶ ಮಾಡಿಕೊಡಬೇಕು, ಅದೇ ರೀತಿ ರಾಜಮನೆತನ ದಸರಾ ನಡೆಸಲು ನಾವು ಅವಕಾಶ ಮಾಡಿಕೊಡಬೇಕು. ಅವರು ಧಾರ್ಮಿಕ ಕಾರ್ಯ ನಡೆಸಲು ಸ್ವತಂತ್ರರು. ಅವರಿಗೆ ಖಾಸಗಿ ದಸರಾ ನಡೆಸಲು ಅವಕಾಶವಿದೆ. ಹೀಗಾಗಿ ಸಮನ್ವಯತೆ ಎಂಬುದು ಮುಖ್ಯವಾಗಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧ ಎಂದ್ರು ಯತೀಂದ್ರ.
7 ದಿನಗಳ ದಸರಾ ವಿಚಾರ : ವಿಜಯದಶಮಿ , ಆಯುಧಪೂಜೆಗೆ ಅನುವು ಮಾಡಿಕೊಟ್ಟು, ಸರ್ಕಾರ 7 ದಿನ ದಸರಾ ಆಚರಿಸುವ ಪ್ರಮೋದಾದೇವಿ ಅವರ ಪ್ರಸ್ತಾಪದ ಬಗ್ಗೆ ಮಾತಾಡಿದ ಯತೀಂದ್ರ ಅವ್ರು, ಅರಮನೆ , ಪ್ಯಾಲೇಸ್ ಬೋರ್ಡ್ ಸರ್ಕಾರದ್ದು, ಅವರು ಹೇಳಿದಂತೆ ಮಾಡಲು ಸಾಧ್ಯವಿಲ್ಲ.ಈ ಕುರಿತು ಸರ್ಕಾರ ಕೂಡ ಒಪ್ಪುವುದಿಲ್ಲ. ಸರ್ಕಾರದ ತೀರ್ಮಾನದಂತೆ ದಸರಾ ಮಹೋತ್ಸವ ನಡೆಯಲಿದ್ದು, ಸರ್ಕಾರದ ತೀರ್ಮಾನವೇ ಅಂತಿಮ ಎಂದಿದ್ದಾರೆ.
‘ದುಡ್ಡು ಕೊಟ್ಟು ಅಂಬಾರಿ ಪಡೆದಿದ್ದೇವೆ’ : ಅಂಬಾರಿ ನಮ್ಮದು ಎಂಬ ರಾಜಮಾತೆ ಹೇಳಿಕೆ ಬಗ್ಗೆ ಮಾತಾಡಿದ ಯತೀಂದ್ರ ಅವ್ರು, ಜಂಬೂಸವಾರಿ ದಿನ ಅಂಬಾರಿ ಪಡೆದು ಉತ್ಸವ ಮಾಡ್ತೀವಿ. ಅದನ್ನ ಫ್ರೀಯಾಗಿ ನಾವು ಪಡೆಯುತ್ತಿಲ್ಲ. ಅದಕ್ಕೆ ದುಡ್ಡು ಕೊಟ್ಟು ಪಡೆದು ನಂತರ ವಾಪಸ್ ನೀಡ್ತೀವಿ ಎಂದು ಸಚಿವ ಯತೀಂದ್ರ ಹೇಳಿದ್ದಾರೆ.
‘ಪ್ರಮೋದಾದೇವಿ ಅವರಿಗೆ ಹೇಳಬೇಕು ಅಂತಿಲ್ಲ’ : ಅಂಬಾರಿ ಆನೆ ಬದಲಾವಣೆಯೇ ನಮಗೆ ತಿಳಿಸಿಲ್ಲ ಎಂದ ಪ್ರಮೋದಾದೇವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತೀಂದ್ರ ಅವರು, ಈ ಫಾರೆಸ್ಟ್ ಡಿಪಾರ್ಟೆಂಟ್ ತೀರ್ಮಾನ ಮಾಡೋದು ತಡವಾಯ್ತು. ಮೊದಲು ಧನಂಜಯ ಎಂದಾಗಿತ್ತು, ಆಮೇಲೆ ಮಹೇಂದ್ರ ಅಂತಾಯ್ತು. ಕೊನೇ ಕ್ಷಣದವರೆಗೂ ತೀರ್ಮಾನ ಅಸ್ಪಷ್ಟವಾಗಿತ್ತು. ಹೀಗಾಗಿ ಆನೆ ವಿಚಾರ ತಿಳಿಸಲು ವಿಳಂಬ ಆಗಿರಬಹುದು. ಅಲ್ಲದೇ ಈ ಕುರಿತು ಪ್ರಮೋದಾದೇವಿ ಅವರಿಗೆ ಹೇಳಬೇಕು ಅನ್ನೋದು ಇಲ್ಲ ಎಂದು ಮೈಸೂರಲ್ಲಿ ಸಚಿವ ಡಾ.ಯತೀಂದ್ರ ಉತ್ತರ ನೀಡಿದ್ದಾರೆ.
