India-new zealand match suspended due to Rain: ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ನಲ್ಲಿ ನಡೆಯಬೇಕಿದ್ದ 3ನೇ ಏಕದಿನ ಪಂದ್ಯ ನಿರಂತರ ಮಳೆಯ ಕಾರಣ ರದ್ದಾಗಿದೆ.
ಹ್ಯಾಮಿಲ್ಟನ್, ನ.10: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯಬೇಕಿದ್ದ 3ನೇ ಏಕದಿನ ಪಂದ್ಯ ನಿರಂತರ ಮಳೆಯ ಕಾರಣ ಒಂದೇ ಒಂದು ಎಸೆತ ಕೂಡ ಕಾಣದೆ ರದ್ದಾಗಿದೆ. ನಿರಂತರ ಮಳೆಯಿಂದಾಗಿ ಫೀಲ್ಡ್ ಅಂಪೈರ್ ಗಳು ಪಂದ್ಯವನ್ನು ಕೈಬಿಡಲು ನಿರ್ಧರಿಸಿದರು ಎನ್ನಲಾಗಿದೆ.
ಪಂದ್ಯ ಆರಂಭಿಸಲು ಕೊನೆಯ ಬಾರಿ ಅಂಪೈರ್ಗಳು ಮೈದಾನದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆದರೆ ಮಳೆ ನಿಲ್ಲದ ಕಾರಣ ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಉಭಯ ತಂಡಗಳ ನಾಯಕರಿಗೆ ಮಾಹಿತಿ ನೀಡಿದರು. ಹಾಗಾಗಿ ನಿರ್ಣಾಯಕ ಪಂದ್ಯ ಮಳೆಗೆ ಆಹುತಿಯಾಗಿದೆ.
