ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸಲು ಚಿಂತನೆ
ಹಳೆಯ ಕಾನೂನನ್ನು ಮುಂದುವರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಬಿಕೆ ಹರಿಪ್ರಸಾದ್ ಮಾಹಿತಿ
2022 ರಲ್ಲಿ ಹೇಗಿತ್ತೋ ಅದೇ ತರಕ್ಕೆ ಮತಾಂತರ ಬಿಲ್ ಅನ್ನು ಜಾರಿಗೆ ತರಲಾಗುವುದು ಎಂದ ಕೆಪಿಸಿಸಿ ಅಧ್ಯಕ್ಷರು
ಬೆಂಗಳೂರು: 2022 ರಲ್ಲಿ ಹೇಗಿತ್ತೋ ಅದೇ ತರಕ್ಕೆ ಮತಾಂತರ ಬಿಲ್ ಅನ್ನು ಜಾರಿಗೆ ತರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಲ್ಪಸಂಖ್ಯಾತ, ದಲಿತ ಸಂಘಟನೆಗಳ ವಚನ ಭ್ರಷ್ಟ ಹೋರಾಟದ ಬಗ್ಗೆ, “ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ. 2022 ರಲ್ಲಿ ಹೇಗಿತ್ತೋ ಅದೇ ತರಕ್ಕೆ ಮತಾಂತರ ಬಿಲ್ ಅನ್ನು ಜಾರಿಗೆ ತರಲಾಗುವುದು” ಎಂದರು.ಭಾರತವನ್ನು ಪ್ರತಿನಿಧಿಸುವ ಪಕ್ಷ ಕಾಂಗ್ರೆಸ್. ಜಾತಿ ಧರ್ಮದ ಮೇಲೆ ನಾವು ನಿಂತಿಲ್ಲ. ಎಲ್ಲರ ಅನಿಸಿಕೆ ಅಭಿಪ್ರಾಯಗಳನ್ನು ನಾವು ಆಲಿಸುತ್ತೇವೆ. ಬಿಜೆಪಿಯವರಂತೆ ನಾವು ಸುಳ್ಳು ಹೇಳುವುದಿಲ್ಲ. ಕೋಮುವಾದ ಮಾಡುವುದಿಲ್ಲ. ಮತೀಯ ದ್ಚೇಷಿಗಳು, ಚಡ್ಡಿಗಳು ಎಂದರು.
ಘಟನೆಯನ್ನು ಪುನರ್ರಚನೆ :
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನೆಯನ್ನು ಪುನರ್ರಚಿಸಿ, ಬಲಪಡಿಸಲು ಹೊಸ ರೀತಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಪಾರದರ್ಶಕ ವಿಧಾನ ಅನುಸರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ದೇಶಾದ್ಯಂತ ಸುಮಾರು 800 ಮಂದಿಯನ್ನು ಆಹ್ವಾನಿಸಿ, ಕಾರ್ಯದರ್ಶಿ ಹುದ್ದೆಗಳಿಗೆ ಸಂದರ್ಶನ ನಡೆಸಿ ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದಾದ್ಯಂತ ಒಟ್ಟು 920 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಬೆಂಗಳೂರಿನಿಂದಲೇ 308 ಅರ್ಜಿಗಳು ಸಲ್ಲಿಕೆಯಾಗಿರುವುದು ವಿಶೇಷ.ಎಲ್ಲಾ ಅರ್ಜಿದಾರರನ್ನು ಸಂದರ್ಶನ ಮಾಡುವ ಜವಾಬ್ದಾರಿಯನ್ನು ಹಿರಿಯ ನಾಯಕರ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಈ ಸಂದರ್ಶನ ಸಮಿತಿಯಲ್ಲಿ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಎಲ್. ಶಂಕರ್, ಎಚ್.ಕೆ. ಪಾಟೀಲ್, ತುಕಾರಾಂ, ಲೋಕಸಭಾ ಸದಸ್ಯರು, ನಜೀರ್ ಅಹಮದ್ ಹಾಗೂ ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರು ಇದ್ದರು ಎಂದು ವಿವರಿಸಿದರು.ಸಂದರ್ಶನ ಪ್ರಕ್ರಿಯೆಯ ಮೂಲಕ ಒಟ್ಟು 112 ಕೆಪಿಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗುತ್ತದೆ. ಈ ಕಾರ್ಯದರ್ಶಿಗಳು ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಸಂಘಟನಾ ಕೆಲಸ ಮಾಡಬೇಕು. 112 ಕಾರ್ಯದರ್ಶಿಗಳ ಜೊತೆಗೆ 112 ಕೋಆರ್ಡಿನೇಟರ್ಗಳನ್ನೂ ನೇಮಕ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೂ ವಿವಿಧ ಮುಖಂಡರನ್ನು ನೇಮಕ ಮಾಡುವ ಉದ್ದೇಶದಿಂದ ಸಂದರ್ಶನ ಪ್ರಕ್ರಿಯೆ ಮುಂದುವರಿಸಲಾಗಿದೆ.ಇಂತಹ ಬಹಿರಂಗ ಸಂದರ್ಶನ ಮತ್ತು ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಬಾರಿಗೆ ಅನುಸರಿಸಲಾಗುತ್ತಿದೆ. ಅರ್ಜಿಗಳ ಸಂಖ್ಯೆಯನ್ನು ಗಮನಿಸಿದಾಗ ಪಕ್ಷದ ಕಾರ್ಯಕರ್ತರಲ್ಲಿ ಸಂಘಟನಾ ಕೆಲಸ ಮಾಡಲು ಅಪಾರ ಉತ್ಸಾಹ ಮತ್ತು ಆಸಕ್ತಿ ಇರುವುದು ಸ್ಪಷ್ಟವಾಗಿದೆ. ರಾಜಕೀಯ ಪಕ್ಷದ ಸಂಘಟನೆ ಮಾಡುವಾಗ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ ಈ ಬಾರಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಹೊಸ ಪ್ರಯತ್ನ ಮಾಡಲಾಗಿದೆ.ಯಾವುದೇ ಗುಂಪುಗಾರಿಕೆ, ವ್ಯಕ್ತಿಗತ ಇಷ್ಟಾನಿಷ್ಟಗಳು ಅಥವಾ ಲೈಕ್ಸ್ ಅಂಡ್ ಡಿಸ್ಲೈಕ್ಸ್ಗಳಿಗೆ ಅವಕಾಶ ನೀಡದೆ, ನಿಜವಾಗಿ ಕೆಲಸ ಮಾಡುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ಈ ಹೊಸ ನೇಮಕಾತಿ ವಿಧಾನದಿಂದ ಪಕ್ಷದ ಸಂಘಟನೆ ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ.ಕಲಬುರಗಿ ವಿಭಾಗದ ಸಂದರ್ಶನ ಪ್ರಕ್ರಿಯೆ ನಡೆಸಲಾಗುವುದು. ಕಲಬುರಗಿ ವಿಭಾಗದ ವ್ಯಾಪ್ತಿಗೆ ಬರುವ ಬೀದರ್, ರಾಯಚೂರು, ಕಲಬುರಗಿ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ವಿಜಯನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಂದ ಒಟ್ಟು ಸುಮಾರು 111 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.