T.A.SHARAVANA pray goddess Hasanamba for people: ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದು ನಾಡಿನ ಸುಭಿಕ್ಷೆ, ರೈತರ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಜೆಡಿಎಸ್ ಶಾಸಕ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ
ಹಾಸನ, ನ.6: ಪ್ರತಿವರ್ಷದಂತೆ ಈ ವರ್ಷವೂ ಹಾಸನದ ಅಧಿದೇವತೆ, ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ಶ್ರೀ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸದಸ್ಯರ ಜೊತೆ ಭಾಗವಹಿಸಿ, ತಾಯಿಯ ದಿವ್ಯ ದರ್ಶನ ಪಡೆದು ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ. ನಮ್ಮ ರಾಜ್ಯವು ಅಭಿವೃದ್ಧಿ ಮತ್ತು ಪ್ರಗತಿಯ ಪಥದಲ್ಲಿ ಮತ್ತಷ್ಟು ಎತ್ತರಕ್ಕೆ ಸಾಗಲಿ ಎಂದು ತಾಯಿ ಹಾಸನಾಂಬೆಯಲ್ಲಿ ಪ್ರಾರ್ಥಿಸಿರುವುದಾಗಿ ಟಿ.ಎ.ಶರವಣ ಹೇಳಿದರು.
ವಿಶೇಷವಾಗಿ ನಾಡಿನ ಬೆನ್ನೆಲುಬಾಗಿರುವ ಅನ್ನದಾತ ರೈತಾಪಿ ವರ್ಗದ ಬದುಕು ಹಸನಾಗಲಿ. ಕೃಷಿಗೆ ಪೂರಕವಾದ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿ, ಭೂಮಿಯು ಹಸಿರಿನಿಂದ ಕಂಗೊಳಿಸಲಿ. ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಿ ಸಂತೋಷದಿಂದ ಜೀವನ ನಡೆಸುವಂತಾಗಲಿ ಎಂದು ತಾಯಿಯಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದೇನೆ. ತಾಯಿ ಶ್ರೀ ಹಾಸನಾಂಬೆಯ ದಿವ್ಯ ಕೃಪೆ ಮತ್ತು ಆಶೀರ್ವಾದ ನಾಡಿನ ಪ್ರತಿಯೊಂದು ಕುಟುಂಬದ ಮೇಲಿರಲಿ. ಸರ್ವರ ಸಂಕಷ್ಟಗಳು ದೂರವಾಗಿ, ಪ್ರತಿಯೊಬ್ಬರ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಹಾಗೂ ಸೌಭಾಗ್ಯ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಟಿ.ಎ.ಶರವಣ ನುಡಿದರು.

