Dr.Raj relative house crude bomb attacked?: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ.ರಾಜ್ಕುಮಾರ್ ಅವರ ಸಂಬಂಧಿ ಮನೆ ಬಳಿ ನಿಗೂಢ ಸ್ಫೋಟ ಸಂಭವಿಸಿದ್ದು, ಕಚ್ಚಾ ಬಾಂಬ್ ದಾಳಿಯ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಮನೆಯ ಕಿಟಕಿ ಗಾಜುಗಳು ಪುಡಿಯಾಗಿದ್ದು, ತಾಳವಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಾಮರಾಜನಗರ, ನ. 10: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್ಕುಮಾರ್ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ತಮಿಳುನಾಡಿನ ತಾಳವಾಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ದೀಪಾವಳಿ ಹಿನ್ನೆಲೆ ಪಟಾಕಿಯಿಂದ ಈ ಸ್ಫೋಟ ಆಗಿರಬಹುದೆಂದು ಮೊದಲು ಅನುಮಾನವಿತ್ತಾದರೂ, ಸ್ಫೋಟದ ತೀವ್ರತೆ ಗಮನಿಸಿದಾಗ ಕಚ್ಚಾ ಬಾಂಬ್ನಿಂದ ಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಡಾ.ರಾಜ್ ಸಹೋದರಿ ಮೊಮ್ಮಗಳು ಮನೋಗ್ನ ಮಾಹಿತಿಯಂತೆ ಯಾರೋ ಬೇಕೆಂದೆ ಮನೆಮೇಲೆ ದಾಳಿ ಮಾಡಿದ್ದಾರೆ. ನಾನು ನೋಡಿದಾಗ ಕೆಲ ಹುಡುಗರು ಇದ್ದರು. ಹೊರ ಬಂದ ತಕ್ಷಣ ಓಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ ಎಂದು ಮನೋಗ್ನ ಹೇಳಿದ್ದಾರೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಫೋಟದ ಸ್ಯಾಂಪಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದು, ಮಾದರಿಗಳ ವಿಶ್ಲೇಷಣೆ ನಡೆಸಿದ ನಂತರವೇ ಸ್ಫೋಟದ ಸ್ವರೂಪ ಮತ್ತು ಬಳಸಲಾದ ಸ್ಫೋಟಕಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
