BJP asks state government to provide an account of development during PM Modi’s visit. – ಬೆಂಗಳೂರಿನ ಅಭಿವೃದ್ಧಿಗೆ ಕೊಟ್ಟ ಹಣದ ವಿವರ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗ್ರೇಟರ್ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಿದ್ದೀರೆಂದು ತಿಳಿಸಿ ಎಂದ ಅವರು, ಕೃಷ್ಣಬೈರೇಗೌಡರ ಟ್ವೀಟ್ನಲ್ಲಿ ಹುರುಳಿಲ್ಲ ಎಂದಿದ್ದಾರೆ. ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ ಯೋಜನಾ ವೆಚ್ಚ ಹೆಚ್ಚಿದ್ದು ಗೊತ್ತಿಲ್ಲವೇ? ರಾಜ್ಯದ ಕಾನೂನು- ಸುವ್ಯವಸ್ಥೆ ಏನಾಗಿದೆ? ಎಂದು ಪ್ರಶ್ನಿಸಿದ್ದಾರೆ.
![]()
ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅಗಮಿಸುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಲೆಕ್ಕ ಕೊಡಿ ಎಂದು ಬಿಜೆಪಿ ಸವಾಲು ಹಾಕಿದೆ. ಈ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಪ್ರಧಾನಮಂತ್ರಿಗಳ ಕುರಿತು ಮನಸೋ ಇಚ್ಛೆ ಟೀಕೆಗಳನ್ನು ಮಾಡಿಕೊಂಡು ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಗಳೂರು ಹಾಗೂ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ನಾಳೆ ಆಗಮಿಸುವರು ಎಂದು ತಿಳಿಸಿದರು. ಮುಖ್ಯಮಂತ್ರಿಗಳು, ಸಚಿವ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆಯವರ ಹೇಳಿಕೆಗಳನ್ನು ನಿನ್ನೆ ಗಮನಿಸಿದ್ದೇನೆ. ನನಗೆ ಇದರ ಕುರಿತು ಆಕ್ರೋಶವೂ ಬಂತು; ಬೇಸರವೂ ಆಗಿದೆ ಎಂದು ನುಡಿದರು.
ಸತ್ಯಕ್ಕೆ ದೂರವಾದ ಟ್ವೀಟ್ :
‘ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ; ನನ್ನ ಭಾಷಣ ಕಟ್’ ಎಂದು ಕೃಷ್ಣಬೈರೇಗೌಡರು ಟ್ವೀಟ್ ಕೂಡ ಮಾಡಿÀದ್ದಾರೆ. ಕೃಷ್ಣಬೈರೇಗೌಡರೇ ನೀವು ಬೆಂಗಳೂರು ಅಭಿವೃದ್ಧಿ ಸಚಿವರಿರಬಹುದು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಇದೇ ಪ್ರಧಾನಮಂತ್ರಿ ಮೋದಿಜೀ ಅವರು ಬೆಂಗಳೂರಿಗೆ ಯೆಲ್ಲೋ ಮೆಟ್ರೊ ಲೈನ್ ಉದ್ಘಾಟನೆಗೆ ಬಂದಿದ್ದರು. ಅಂದಿನ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರರಿಗೆ ಭಾಷಣಕ್ಕೆ ಅವಕಾಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯನವರು ಭಾಷಣ ಮಾಡಿದ್ದರು. ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ನಿಮ್ಮ ಭಾಷಣ ರದ್ದು ಮಾಡಿದ್ದಾಗಿ ಟ್ವೀಟ್ ಮಾಡಿದ್ದು ಸತ್ಯಕ್ಕೆ ದೂರ ಎಂದು ತಿಳಿಸಿದರು.
ಎಷ್ಟು ಸಾವಿರ ಕೋಟಿ ಕೊಟ್ಟಿದ್ದೀರಿ?
‘ಬೆಂಗಳೂರಿನ ಅಭಿವೃದ್ಧಿ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದೂ ಕೃಷ್ಣಬೈರೇಗೌಡರು ಹೇಳಿದ್ದಾರೆ. ಸ್ವಾಮೀ ಕೃಷ್ಣಬೈರೇಗೌಡರೇ, ಕಳೆದ ಮೂರೂವರೆ ವರ್ಷದಲ್ಲಿ ಬೆಂಗಳೂರು ಮಹಾನಗರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ? ಕಳೆದ ಮೂರೂವರೆ ವರ್ಷದಲ್ಲಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಕೊಟ್ಟಿದ್ದೀರೆಂದು ಬಹಿರಂಗಪಡಿಸಲು ಸವಾಲು ಹಾಕಿದರು. ಬೆಂಗಳೂರು ಮಹಾನಗರದಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಿದ್ದೀರಿ ಎಂದು ಕೇಳಿದರು.
ಯುಕೆಪಿ ಯೋಜನಾ ವೆಚ್ಚ ಹೆಚ್ಚಳದ ಅರಿವಿದೆಯೇ?
ಯೋಜನೆ ಅನುಮೋದನೆ ಪಡೆಯದೇ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ. ರಾಜ್ಯ ಸರಕಾರದ ಮೇಲೆ ಶೇ 86ರಷ್ಟು ಹೊರೆ ಆಗುತ್ತಿದೆ ಎಂದೂ ಹೇಳಿದ್ದಾರೆ. ಕೃಷ್ಣಬೈರೇಗೌಡರೇ, ಮೆಟ್ರೊ ಯೋಜನಾ ವೆಚ್ಚ ಹೆಚ್ಚಾಗುವ ಕುರಿತು ಮಾತನಾಡುತ್ತೀರಲ್ಲವೇ? ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ರೈತರಿಗೆ ನೀರು ಕೊಡುವ ಯುಕೆಪಿ ಯೋಜನೆ ಅನುಮೋದನೆ ಪಡೆದುದು ಯಾವಾಗ? ಆಗಿನ ಯೋಜನಾ ವೆಚ್ಚ ಎಷ್ಟು? ಇವತ್ತು 1 ಲಕ್ಷ ಕೋಟಿ ದಾಟಿದ ಬಗ್ಗೆ ಅರಿವಿದೆಯೇ ನಿಮಗೆ? ಇದರ ಕುರಿತು ಹೋಗಿ ನಿಮ್ಮ ಮುಖ್ಯಮಂತ್ರಿಗಳನ್ನು ಕೇಳಿ ಎಂದು ಆಗ್ರಹಿಸಿದರು. ಪ್ರಧಾನಿಯವರಿಗೆ ಅಪಮಾನ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಹೊರಟಿದೆ ಎಂದು ಖಂಡಿಸಿದರು.
ರಾಜ್ಯದಲ್ಲಿ ಗೃಹ ಸಚಿವರು ಬದುಕಿದ್ದಾರ?
ಮತ್ತೊಂದೆಡೆ ಪ್ರಿಯಾಂಕ್ ಖರ್ಗೆ, ಉಡಾಫೆ ಗೃಹ ಸಚಿವರು. ಪ್ರಧಾನಿಯವರು ಬರುತ್ತಾರೆ; ಕನ್ನಡದಲ್ಲಿ ಭಾಷಣ ಮಾಡುತ್ತಾರೆ. ಬಿಜೆಪಿಯವರು ಸೋಷಿಯಲ್ ಮೀಡಿಯದಲ್ಲಿ ತೇಲಿ ಬಿಡುತ್ತಾರೆ ಎಂದಿದ್ದಾರೆ. ಮುಂಡಗೋಡಿನಲ್ಲಿ ಹನ್ನೆರಡು ವರ್ಷದ ಪರಿಶಿಷ್ಟ ಪಂಗಡದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಇμÁ್ಟದರೂ ಗೃಹ ಸಚಿವರಿಗೆ ಏನಾಗಿದೆ ಎಂಬ ಅರಿವು ಇಲ್ಲ. ನಾಲಿಗೆ ಇದೆ ಎಂದು ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದಾರೆ. ಅವರಿಗೆ ಕಾನೂನು ಸುವ್ಯವಸ್ಥೆ ಬಗೆಗೆ ಅರಿವು ಇಲ್ಲ. ಎಲ್ಲಕ್ಕೂ ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವುದೇ ಅವರ ಕೆಲಸವಾಗಿದೆ ಎಂದು ದೂರಿದರು.
ಮೋದಿ ಅವರು ರಾಜ್ಯಕ್ಕೆ ಏನು ಬೇಕು ಅಷ್ಟು ಅನುದಾನ ನೀಡುತ್ತಾ ಇದ್ದಾರೆ. ಆದರೆ ಇಲ್ಲಿನ ನಾಯಕರಿಂದ ಅನ್ಯಾಯವಾಗುತ್ತಿದೆ. ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಪ್ರಧಾನಿಗಳ ಬಗ್ಗೆ ಬೇಜವಬ್ದಾರಿಯಿಂದ ಮಾತನಾಡುವುದನ್ನು ಬಿಟ್ಟು ಗೌರವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ನಾವು ಮುಸ್ಲಿಮರ ವಿರೋಧಿಗಳಲ್ಲ
ಅಲ್ಪಸಂಖ್ಯಾತರಿಗೆ ಸೇನಾ ತರಬೇತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿ ಹಂತದಲ್ಲೂ ಸರ್ಕಾರ ಅಲ್ಪಸಂಖ್ಯಾತರನ್ನು ವಿಶೇಷವಾಗಿ ಮುಸ್ಲಿಂರನ್ನು ಹಿಂದೂಗಳಿಂದ ವಿಭಜನೆ ಮಾಡುತ್ತಿದೆ. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಕಾಂಗ್ರೆಸ್ ನವರು ವ್ಯವಸ್ಥಿತವಾಗಿ ಮುಸ್ಲಿಮರನ್ನು ಅಡ್ಡದಾರಿಗೆ ಎಳೆಯುತ್ತಿದೆ ಎಂದು ದೂರಿದರು.
ಗೂಂಡಾಗಿರಿ ಕಾಂಗ್ರೆಸ್ನವರ ಹುಟ್ಟು ಗುಣ
ಪ್ರಧಾನಿ ನಾಳೆ ಆಗಮಿಸಲಿದ್ದಾರೆ. ಪ್ರಶಾಂತಿ ಕುಟೀರಂನ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅದು ಸರ್ಕಾರಿ ಕಾರ್ಯಕ್ರಮವಲ್ಲ. ಆನಂತರ ಮೆಟ್ರೊಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮಧ್ಯಾಹ್ನ ದೆಹಲಿಗೆ ತೆರಳಿದ್ದಾರೆ. ನಾವು ಮೋದಿ ಅವರ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲ್ಲ. ಜನರೇ ಹಲವು ಕಡೆಗಳಲ್ಲಿ ಸೇರಲಿದ್ದಾರೆ. ಮೋದಿ ಅವರನ್ನು ನೋಡಲು ಸಾವಿರಾರು ಜನ ಸೇರಲಿದ್ದಾರೆ. ಕಾಂಗ್ರೆಸ್ ಫುಡಾರಿಗಳು ಬಿಜೆಪಿ ಫ್ಲೆಕ್ಸ್ಗಳನ್ನು ಕಿತ್ತು ಹಾಕಿದ್ದಾರೆ. ಇಲ್ಲೂ ಗೂಂಡಾಗಿರಿ ಮಾಡ್ತಾ ಇದ್ದಾರೆ. ಅದು ಅವರ ಹುಟ್ಟುಗುಣ ಎಂದು ಆಕ್ಷೇಪಿಸಿದರು.
