ದರ್ಶನ್ ಬೇಲ್ ರಿಜೆಕ್ಟ್ ಮಾಡಿದ ಸುಪ್ರೀಂ | ದರ್ಶನ್ ಬಳ್ಳಾರಿ ಜೈಲ್ಗೆ ವಾಪಸ್
ಬಳ್ಳಾರಿ : ಕಿಲ್ಲಿಂಗ್ ಸ್ಟಾರ್ ದರ್ಶನ್ ಬೇಲ್ ರಿಜೆಕ್ಟ್ ಮಾಡಿದ ಸುಪ್ರೀಂ ಕೋರ್ಟ್, ಮತ್ತೆ ಆರೋಪಿ ದರ್ಶನ್ ಬಳ್ಳಾರಿ ಜೈಲ್ಗೆ ವಾಪಸ್ ಬರುವ ಸಾಧ್ಯತೆ. ರಾಜ್ಯದ ಪ್ರಮುಖ ಜೈಲ್ ಗಳಲ್ಲಿ ಒಂದಾಗಿರುವ ಬಳ್ಳಾರಿ ಜೈಲ್ನ ಭದ್ರತೆ ಮತ್ತು ರಕ್ಷಣೆಯ ದೃಷ್ಠಿಯಿಂದ ತನ್ನದೇಯಾದ ಮಹತ್ವ ಪಡೆದಿದೆ. ಈ ಹಿಂದೆ ಸುಮಾರು 63 ದಿನಗಳು ಬಳ್ಳಾರಿ ಜೈಲ್ ನಲ್ಲಿ ಕಾಲ ಕಳೆದಿದ್ದ ಕಿಲ್ಲಿಂಗ್ ಸ್ಟಾರ್ ಈ ಕ್ಷಣ ಅಥವಾ ನಾಳೆ ಇಲ್ಲವೆ ಕೆಲ ದಿನಗಳಲ್ಲಿ ಬಳ್ಳಾರಿ ಜೈಲ್ ಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ಸರ್ಜೀಕ್ ಚೇರ್ ಸೇರಿದಂತೆ ಹಲವು ಕಡೆ ಸೌಲಭ್ಯಗಳ ಪಡೆದ್ರು ಆರೋಗ್ಯ ಸಮಸ್ಯೆ ಎದುರಿಸಿದ್ರು.
ಡೇವಿಲ್ ಗೆ ಮತ್ತೆ ಬಳ್ಳಾರಿ ಜೈಲ್ ನಲ್ಲಿ ಸೆರೆವಾಸ ಫಿಕ್ಸ್ ಆಗಬಹುದು. ದರ್ಶನ್ ಜಾಮೀನು ಅರ್ಜಿ ರದ್ದಾದ ಹಿನ್ನೆಲೆ, ದರ್ಶನ್ ಬಳ್ಳಾರಿ ಬರುವ ಸಾಧ್ಯತೆ ಹೆಚ್ಚಾದ ಹಿನ್ನೆಲೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಜಾಮೀನು ಅರ್ಜಿ ರದ್ದಾಗಿದೆ ಹೀಗಾಗಿ ದರ್ಶನ್ ಬಳ್ಳಾರಿ ಬರುವ ಸಾಧ್ಯತೆ ಹೆಚ್ಚಾದ ಹಿನ್ನೆಲೆ ಗುರುವಾರ ಬೆಳಿಗ್ಗೆ 10ಗಂಟೆಗೆಯಿಂದ ಜೈಲಿನಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಜೈಲ್ ನ ಸಿಬ್ಬಂದಿ ಹೈ ಸೆಕ್ಯೂರೆಟಿ ಸೆಲ್ ನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಈ ಮೊದಲು ಇದ್ದ ಕಾಂಪೌಂಡ್ ಗೋಡೆ ಮೇಲೆ ದರ್ಶನ್ ಅಭಿಮಾನಿಗಳು ಹತ್ತುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ಕಾಂಪೌಂಡ್ ವಾಲ್ ಇಪ್ಪತ್ತು ಅಡಿ ಎತ್ತರಕ್ಕೆ ಏರಿಸಲಾಗಿದೆ.ಧ್ವಜಾರೋಹಣದ ಸಿದ್ಧತೆ ಜೊತೆಗೆ ದರ್ಶನ್ ಬರುವಿಕೆಗಾಗಿ ಸಿದ್ಧತೆ ನಡೆಸಲಾಗ್ತಿದೆ.
