ಬೆಂಗಳೂರು, ಜು. 22: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ದಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ. ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಆಪರೇಷನ್ ಸೇಫ್ಟಿ ಸೂಪರ್ವೈಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ತಿಂಗಳಿಗೆ ₹50,000ರಿಂದ ₹1.64 ಲಕ್ಷದವರೆಗೆ ಸಂಬಳ ನೀಡಲಾಗುತ್ತದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
- ಉಪ ಪ್ರಧಾನ ವ್ಯವಸ್ಥಾಪಕರು–ಕಾರ್ಯಾಚರಣೆ ಸುರಕ್ಷತೆ: 1 ಹುದ್ದೆ
- ಸೂಪರ್ವೈಸರ್–ಆಪರೇಷನ್ ಸೇಫ್ಟಿ: 2 ಹುದ್ದೆಗಳು
ಸಂಬಳ ಎಷ್ಟು?
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ ₹1.64 ಲಕ್ಷ ಸಂಬಳ ನೀಡಲಾಗುತ್ತದೆ.
ಆಪರೇಷನ್ ಸೇಫ್ಟಿ ಸೂಪರ್ವೈಸರ್ ಹುದ್ದೆಗೆ ತಿಂಗಳಿಗೆ ₹50,000ರಿಂದ ₹62,500ವರೆಗೆ ವೇತನ ನಿಗದಿಪಡಿಸಲಾಗಿದೆ.
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ಅಲ್ಲದೆ, ಕನಿಷ್ಠ 14 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಈ ಪೈಕಿ ಕನಿಷ್ಠ 8 ವರ್ಷಗಳ ಅನುಭವವು ಮೆಟ್ರೋ ರೈಲು ಅಥವಾ ಭಾರತೀಯ ರೈಲ್ವೆಯ ರೈಲು ಕಾರ್ಯಾಚರಣೆ ಹಾಗೂ ಸುರಕ್ಷತಾ ವಿಭಾಗದಲ್ಲಿರಬೇಕು.
ಸೂಪರ್ವೈಸರ್ ಹುದ್ದೆಗೆ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ಭಾರತೀಯ ರೈಲ್ವೆಯಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.
ವಯೋಮಿತಿ
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಒಪ್ಪಂದದ ಆಧಾರದ ಅಭ್ಯರ್ಥಿಗಳಿಗೆ ಗರಿಷ್ಠ 56 ವರ್ಷ ಹಾಗೂ ಡೆಪ್ಯುಟೇಶನ್ ಅಭ್ಯರ್ಥಿಗಳಿಗೆ ಗರಿಷ್ಠ 48 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿವೃತ್ತ ಅಧಿಕಾರಿಗಳಿಗೆ ಗರಿಷ್ಠ ವಯೋಮಿತಿ 62 ವರ್ಷವಾಗಿದೆ.
ಆಪರೇಷನ್ ಸೇಫ್ಟಿ ಸೂಪರ್ವೈಸರ್ ಹುದ್ದೆಗೆ ಗರಿಷ್ಠ ವಯೋಮಿತಿ 62 ವರ್ಷವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆ
ಆನ್ಲೈನ್ ಅರ್ಜಿಯನ್ನು 2026ರ ಆಗಸ್ಟ್ 10ರೊಳಗೆ ಸಲ್ಲಿಸಬೇಕು. ಅರ್ಜಿಯ ಪ್ರಿಂಟ್ಔಟ್ ಹಾಗೂ ಅಗತ್ಯ ದಾಖಲೆಗಳನ್ನು 2026ರ ಆಗಸ್ಟ್ 13ರ ಸಂಜೆ 4 ಗಂಟೆಯೊಳಗೆ BMRCL ಪ್ರಧಾನ ಕಚೇರಿಗೆ ತಲುಪಿಸಬೇಕು.
ಆಪರೇಷನ್ ಸೇಫ್ಟಿ ಸೂಪರ್ವೈಸರ್ ಹುದ್ದೆ
ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ, ಅರ್ಜಿಯ ಪ್ರಿಂಟ್ಔಟ್ ಹಾಗೂ ಅಗತ್ಯ ದಾಖಲೆಗಳನ್ನು 2026ರ ಜುಲೈ 31ರ ಸಂಜೆ 4 ಗಂಟೆಯೊಳಗೆ BMRCL ಪ್ರಧಾನ ಕಚೇರಿಗೆ ತಲುಪಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ
ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
ಶಾಂತಿನಗರ, ಬೆಂಗಳೂರು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಶೈಕ್ಷಣಿಕ ಅರ್ಹತೆ, ಅನುಭವ, ವಯೋಮಿತಿ ಹಾಗೂ ಅಗತ್ಯ ದಾಖಲೆಗಳ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.
